ಹೊಸದಿಲ್ಲಿ, ಫೆ. 22: ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ಡೀಸೆಲ್ ಬೆಲೆಯನ್ನು ಇಳಿಸಿ ಮತ್ತು ಶೇ. 12ರ ಪೂರ್ವ ಬಿಕ್ಕಟ್ಟಿಗೆ ತಕ್ಕಂತೆ ಅಬಕಾರಿ ಸುಂಕ ಮತ್ತು ಸೇವಾ ತೆರಿಗೆಗಳನ್ನು ಹೆಚ್ಚಿಸಿ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಇಂದು ಸಲಹೆ ನೀಡಿದೆ.
2011-12ನೆ ಸಾಲಿನ ಆರ್ಥಿಕ ಸ್ಥಿತಿಯ ಪರಿಶೀಲನಾ ವರದಿಯನ್ನು ಇಂದು ಬಿಡುಗಡೆ ಮಾಡಿರುವ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಸಿ. ರಂಗರಾಜನ್ ಯೂರಿಯಾ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿ ಎಂದು ಸಲಹೆ ನೀಡಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.4.6 ಜಿಡಿಪಿ ಗುರಿಯನ್ನು ಸಾಧಿಸದಿರುವುದಕ್ಕೆ ಮತ್ತು ಹೆಚ್ಚಿದ ಆರ್ಥಿಕ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಂಡಳಿ, ಸಬ್ಸಿಡಿ ನೀಡಿಕೆಯಲ್ಲಿ ಸರಕಾರ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದೆ.
2012-13ನೆ ಸಾಲಿನಲ್ಲಿ ಡೀಸೆಲ್ ಬೆಲೆಗಳಲ್ಲಿ ಇಳಿಕೆ ರೀತಿಯ ಕೆಲವು ಹೊಂದಾಣಿಕೆಗಳನ್ನು ಮಾಡುವುದು ಅಗತ್ಯವಾಗಿದೆ. ಒಂದು ಹಂತವನ್ನು ಮೀರಿ ನಾವು ಈ ಕ್ಷೇತ್ರಕ್ಕೆ ಸಬ್ಸಿಡಿ ನೀಡಲು ಸಾಧ್ಯವಾಗದಿರುವುದರಿಂದ ಕೆಲ ಸಮಯದವರೆಗಾದರೂ ನಾವು ಇಳಿಕೆ ರೀತಿಯ ಹೊಂದಾಣಿಕೆ ಮಾಡದಿದ್ದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಮಂಡಳಿ ಹೇಳಿದೆ.
2011ರ ಜೂನ್‌ನಲ್ಲಿ ಡೀಸೆಲ್ ಬೆಲೆಯನ್ನು ಹೆಚ್ಚಿಸಿದರೂ ಬೆಲೆಯೇರಿಕೆಯನ್ನು ತಡೆಯಲು ಸರಕಾರ ಅಬಕಾರಿ ಮತ್ತು ಸುಂಕ ಶುಲ್ಕವನ್ನು ಕಡಿತಗೊಳಿಸಿದ್ದರಿಂದ ವಾರ್ಷಿಕ ರೂ. 38.000 ಕೋಟಿಗಳ ರಜಸ್ವ ಸಂಗ್ರಹಕ್ಕೆ ಪೆಟ್ಟು ಬಿದ್ದಿತ್ತು ಎಂದು ಮಂಡಳಿ ಹೇಳಿದೆ.
ಪೋಷಕಾಂಶ ಆಧಾರಿತ ಸಹಾಯಧನ ಪದ್ದತಿ ಜಾರಿಗೆ ರಸಗೊಬ್ಬರಗಳ ಸಹಾಯಧನ ನೀಡಿಕೆಯಲ್ಲಿ ಭಾಗಶಃ ಸುಧಾರಣೆ ತರುವ ಅಗತ್ಯವಿರುವುದರಿಂದ ಯೂರಿಯಾ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಬೇಕು ಅಥವಾ ಗಣನೀಯವಾಗಿ ಅದರ ಬೆಲೆಯನ್ನು ಹೆಚ್ಚಿಸಬೇಕು ಎಂದು ಆರ್ಥಿಕ ಸಲಹಾ ಮಂಡಳಿ ಪ್ರಧಾನಮಂತ್ರಿಗಳಿಗೆ ಸಲಹೆ ನೀಡಿದೆ.
ಯುರೋಪಿನಲ್ಲಿ ಈಗ ಬದಲಾವಣೆಯ ಗಾಳಿ ಬೀಸತೊಡಗಿದೆ. ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕ ಬಿಕ್ಕಟ್ಟು ಆ ಭೂಭಾಗದ ನಾಲ್ಕು ಪ್ರದೇಶಗಳಲ್ಲಿ ನಡೆದ ಚುನಾವಣೆಯ ...
Click here to post your views ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...
ಅಧಿಕಾರ ರಾಜಕಾರಣ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ರಾಜಸ್ಥಾನ, ಉತ್ತರಖಂಡ, ಕರ್ನಾಟಕ ಹ ...