
ಆಸ್ಟ್ರೇಲಿಯದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಪೊಲೀಸ್ ಅಧಿಕಾರಿಯಾಗಿ ಕಳ್ಳರನ್ನು, ದರೋಡೆಕೋರರನ್ನು ಸದೆ ಬಡಿದಿದ್ದ ಮಾಜಿ ವೇಗದ ಬೌಲರ್ ಜೋ ಡ್ಯಾವ್ಸ್ ಟೀಮ್ ಇಂಡಿಯಾದ ನೂತನ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ನಿರಂತರ ಸೋಲಿನ ಹಿನ್ನೆಲೆಯಲ್ಲಿ ಬೌಲಿಂಗ್ ಕೋಚ್ ಎರಿಕ್ ಸಿಮನ್ಸ್ ಅವರನ್ನು ಬಿಸಿಸಿಐ ತವರಿಗೆ ಕಳುಹಿಸುವ ನಿರ್ಧಾರವನ್ನು ಕೈಗೊಂಡಿದೆ.ಅವರ ಬದಲಾಗಿ ಆಸ್ಟ್ರೇಲಿಯದ ಜೋ ಡ್ಯಾವ್ಸ್‌ರನ್ನು ಕೋಚ್ ಡಂಕನ್ ಪ್ಲಚರ್ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ.ಡ್ಯಾವ್ಸ್ ತನ್ನ 21ರ ಹರೆಯದಲ್ಲಿ ಪೊಲೀಸ್ ಇಲಾಖೆ ಸೇರಿದವರು.ಆ ಬಳಿಕ ತನ್ನ ಕರ್ತವ್ಯದೊಂದಿಗೆ ಕ್ರಿಕೆಟ್ ಆಟದಲ್ಲಿ ತೊಡಗಿಸಿಕೊಂಡಿದ್ದರು.27ರ ಹರೆಯದಲ್ಲಿ ಕ್ವೀನ್ಸ್‌ಲೆಂಡ್ ತಂಡದ ಮೂಲಕ ಕ್ರಿಕೆಟ್ ಪ್ರವೇಶಿಸಿದರು.ಆ ಬಳಿಕ ನಾಲ್ಕು ವರ್ಷ ಕ್ರಿಕೆಟ್ ಹಾಗೂ ಪೊಲೀಸ್ ಅಧಿಕಾರಿಯಾಗಿ ತನ್ನ ಕರ್ತವ್ಯವನ್ನು ಒಟ್ಟಿಗೆ ನಿಭಾಯಿಸಿದರು.ಕ್ರಿಕೆಟ್ ಆಟಗಾರನಾಗಿರುವ ಜೊತೆಗೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದವರು.ಎರಿಕ್ ಸಿಮಮ್ಸ್ ಉತ್ತರಾಧಿಕಾರಿ 41ರ ಹರೆಯದ ಕ್ವೀನ್ಸ್‌ಲೆಂಡ್‌ನ ಜೋ ಡ್ಯಾವ್ಸ್ ಯಾನೆ ಜೋಸೆಫ್ ಹೆನ್ರಿ ಡ್ಯಾವ್ಸ್ ಟೆಸ್ಟ್ ಕ್ರಿಕೆಟ್ ಆಡಿದ ಅನುಭವ ಹೊಂದಿಲ್ಲ.ಸಿಮನ್ಸ್ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಮಾಜಿ ಆಲ್‌ರೌಂಡರ್ ಆಗಿ ಅನುಭವ ಪಡೆದಿದ್ದರು.
ಸಿಮನ್ಸ್ ಟೆಸ್ಟ್ ಆಡಿದವರಲ್ಲ.ಆದರೆ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದರು. 1994-95ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ಪರ 23 ಪಂದ್ಯಗಳಲ್ಲಿ ಆಡಿ 33 ವಿಕೆಟ್ ಮತ್ತು 217 ರನ್ ಕಲೆ ಹಾಕಿದ್ದರು. 123 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 2 ಶತಕ, 25 ಅರ್ಧಶತಕ, 4264 ರನ್ ,330 ವಿಕೆಟ್ ಸಂಪಾದಿಸಿದ್ದರು. ಜೋ ಅವರು ಆಸ್ಟ್ರೇಲಿಯದ ಮಿಡಲ್‌ಸೆಕ್ಸ್, ಕ್ವೀನ್ಸ್‌ಲೆಂಡ್ ಮೆರಿಲ್‌ಬೋನ್ ಕ್ಲಬ್ ಪರ 1997ರಿಂದ 2005ರ ತನಕ 76 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿ 285ವಿಕೆಟ್ ಮತ್ತು 616ರನ್‌ಗಳನ್ನು ಸಂಪಾದಿಸಿದ್ದಾರೆ.1997ರಲ್ಲಿ ಕ್ವೀನ್ಸ್‌ಲೆಂಡ್ ತಂಡದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ಪ್ರವೇಶಿಸಿದ ಜೋ 2005ರ ಅ.17-20ರ ತನಕ ನಡೆದ ಟಾಸ್ಮೇನಿಯ ವಿರುದ್ಧದ ಕೊನೆಯ ಪಂದ್ಯವನ್ನು ಆಡಿದ್ದರು.ಆಸ್ಟ್ರೇಲಿಯದ ಮಿಡಲ್‌ಸೆಕ್ಸ್ ತಂಡದ ಆಟಗಾರನಾಗಿ ಜೂ.18, 2003ರಲ್ಲಿ ಏಕೈಕ ಟ್ವೆಂಟಿ 20 ಪಂದ್ಯ ಆಡಿದ್ದರು.
ಮೊಣಕಾಲಿನ ನೋವಿನ ಕಾರಣ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.ಆಟ ಬಿಟ್ಟು ಕೋಚ್ ಆಗಿ ವೃತ್ತಿ ಜೀವನ ಆರಂಭಿಸಿ ಅಲ್ಪಾವಧಿಯಲ್ಲಿ ಅತ್ಯು ತ್ತಮ ಬೌಲರ್‌ಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದರು.ಕ್ವೀನ್ಸ್‌ಲೆಂಡ್ ತಂಡದ ಕೋಚ್ ಆಗಿ ಹೊಸ ವೃತ್ತಿ ಜೀವನ ಆರಂಭಿಸಿದ ಜೋ ಮಿಡಲ್‌ಸೆಕ್ಸ್,ಮೆರಿಲ್‌ಬೋನ್ ಕ್ಲಬ್ ಪರ ಪಾರ್ಟ್‌ಟೈಮ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. 2011ರ ಜೂನ್‌ನಲ್ಲಿ ಸೌತ್ ಆಸ್ಟ್ರೇಲಿಯದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡರು. ಬಳಿಕ 2011-12ರ ಬಿಗ್ ಬ್ಯಾಷ್ ಲೀಗ್ ಟೂರ್ನಿಗೆ ಅಡಿಲೇಡ್ ಸ್ಟ್ರೈಕರ್ಸ್‌ನ ಬೌಲಿಂಗ್ ಕೋಚ್ ಆಗಿದ್ದರು.ಜೋ ಭಾರತದ ಕೋಚ್ ಡಂಕನ್ ಫ್ಲೆಚರ್ ಅವರನ್ನು ಭೇಟಿಯಾಗಿ ಭಾರತದ ಕೋಚ್ ಬಳಗವನ್ನು ಸೇರುವ ಇಂಗಿತ ವ್ಯಕ್ತಪಡಿಸಿದ್ದರು.ಟೀಮ್ ಇಂಡಿಯಾ ನಾಯಕ ಮಹೇಂದ್ರಸಿಂಗ್ ಧೋನಿ ಅವರನ್ನು ಭೇಟಿಯಾಗಿ ಈ ಸಂಬಂಧ ಮಾತುಕತೆ ನಡೆಸಿದ್ದರು.
ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ಸ್ ಪ್ರಭಾವದಿಂದಾಗಿ 2010ರಲ್ಲಿ ಭಾರತದ ಬೌಲಿಂಗ್ ಕೋಚ್ ಹುದ್ದೆಗೇರಿದ್ದ ನಿರ್ಗಮನ ಬೌಲಿಂಗ್ ಕೋಚ್ ಎರಿಕ್ ಸಿಮನ್ಸ್ ಕಾಲಾವಧಿ ಅಂತ್ಯಗೊಂಡಿದ್ದು,ಮತ್ತೆ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲು ಒಪ್ಪದ ಬಿಸಿಸಿಐ ಅವರಿಗೆ ಗೇಟ್‌ಪಾಸ್ ನೀಡಿದೆ. ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಬ್ಯಾಂಕ್ ತ್ರಿಕೋನ ಸರಣಿ ಕೊನೆ ಗೊಳ್ಳುವ ಬೆನ್ನಲ್ಲೆ ಸಿಮನ್ಸ್ ಅಧಿಕಾರವನ್ನು ಜೋ ಡ್ಯಾವ್ಸ್‌ಗೆ ಬಿಟ್ಟುಕೊಡಲಿದ್ದಾರೆ.
ಹಾಗೆ ನೋಡಿದರೆ ಸಿಮನ್ಸ್ ಕಾಲಾವಧಿ ಟೀಮ್ ಇಂಡಿಯಾದ ಇಂಗ್ಲೆಂಡ್ ಪ್ರವಾಸದ ಮೊದಲೆ ಅಂತ್ಯಗೊಂಡಿತ್ತು.ಫ್ಲೆಚರ್ ಒತ್ತಾಯದ ಮೇರೆಗೆ ಮತ್ತೆ ತನ್ನ ಹುದ್ದೆಯಲ್ಲಿ ಮುಂದುವರಿದಿದ್ದರು.ಸಿಮನ್ಸ್ ಆಸ್ಟ್ರೇಲಿಯ ಪ್ರವಾಸಕ್ಕೂ ಹಿಂದೇಟು ಹಾಕಿದ್ದರು. ಆದರೆ ತನ್ನ ಕಾಲಾವಧಿ ಮುಗಿದರೂ ಅದೇ ಹುದ್ದೆಯಲ್ಲಿ ಮುಂದುವರಿದ ತಪ್ಪಿಗಾಗಿ ಭಾರತದ ವೈಫಲ್ಯದಲ್ಲಿ ಪಾಲು ಪಡೆದಿದ್ದಾರೆ.ಸಿಮನ್ಸ್ ಟೀಮ್ ಇಂಡಿಯಾ ಭಾರತದ ಸಂಬಂಧ ಕಡಿದುಕೊಳ್ಳಲಾರರು.ಯಾಕೆಂದರೆ ಅವರು ಡೆಲ್ಲಿ ಡೇರ್‌ಡೆವಿಲ್ಸ್‌ನ ಕೋಚ್ ಆಗಿ ನೇಮಕಗೊಂಡಿದ್ದಾರೆ.‘‘ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಹುದ್ದೆಯಿಂದ ತನ್ನನ್ನು ವಜಾಗೊಳಿಸಲಾಗಿಲ್ಲ.ಒಪ್ಪಂದದ ಅವಧಿ ಮುಗಿದಿದೆ. ನನಗೆ ಅದೇ ಹುದ್ದೆಯಲ್ಲಿ ಮುಂದುವರಿಯಲು ವೈಯಕ್ತಿಕ ಸಮಸ್ಯೆ ಇದೆ. ತಾನು ಎರಡು ವರ್ಷಗಳಿಂದ ಕುಟುಂಬದಿಂದ ದೂರ ಇರುವೆನು.ಇನ್ನು ತಾನು ಹೆಚ್ಚಿನ ಸಮಯವನ್ನು ಕುಟುಂಬದೊಂದಿಗೆ ಕಳೆಯಲು ಬಯಸಿರುವೆನು’’ ಎಂದು ನಿರ್ಗಮನಕೋಚ್ ಸಿಮನ್ಸ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಮುಗಿಸುವ ಮುನ್ನ:ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರಧಾನ ಕೋಚ್‌ಗಳನ್ನು ತಯಾರಿಸುವ ಕಾರ್ಖಾನೆ ಆಗಿದೆ.ಬೌಲಿಂಗ್ ಕೋಚ್‌ಗಳಾಗಿ ಬಹುತೇಕ ತಂಡಗಳಲ್ಲಿ ಆಸ್ಟ್ರೇಲಿಯದವರು ಸ್ಥಾನ ಪಡೆಯುತ್ತಾರೆ.ಭಾರತದ ನೂತನ ಬೌಲಿಂಗ್ ಕೋಚ್ ಆಗಿ ಅಧಿಕಾರವಹಿಸಿಕೊಳ್ಳಲಿರುವ ಆಸ್ಟ್ರೇಲಿಯ ಜೋ ಯಾವ ರೀತಿಯಲ್ಲಿ ಭಾರತದ ಬೌಲಿಂಗ್ ವಿಭಾಗಕ್ಕೆ ಕಾಯಕಲ್ಪ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಯುರೋಪಿನಲ್ಲಿ ಈಗ ಬದಲಾವಣೆಯ ಗಾಳಿ ಬೀಸತೊಡಗಿದೆ. ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕ ಬಿಕ್ಕಟ್ಟು ಆ ಭೂಭಾಗದ ನಾಲ್ಕು ಪ್ರದೇಶಗಳಲ್ಲಿ ನಡೆದ ಚುನಾವಣೆಯ ...
Click here to post your views ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...
ಅಧಿಕಾರ ರಾಜಕಾರಣ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ರಾಜಸ್ಥಾನ, ಉತ್ತರಖಂಡ, ಕರ್ನಾಟಕ ಹ ...