ಮಹಾರಾಷ್ಟ್ರದ ಮೀನುಗಾರರಿಂದ ಹಲ್ಲೆ, ದೋಣಿಗಳಿಗೆ ಹಾನಿ: ಮಲ್ಪೆ ಮೀನುಗಾರರ ಪ್ರತಿಭಟನೆ, ಕ್ರಮಕ್ಕೆ ಆಗ್ರಹ
mail-img print-img

ಮಹಾರಾಷ್ಟ್ರದ ಮೀನುಗಾರರಿಂದ ಹಲ್ಲೆ, ದೋಣಿಗಳಿಗೆ ಹಾನಿ: ಮಲ್ಪೆ ಮೀನುಗಾರರ ಪ್ರತಿಭಟನೆ, ಕ್ರಮಕ್ಕೆ ಆಗ್ರಹ

ಗುರುವಾರ - ಫೆಬ್ರವರಿ -23-2012

ಉಡುಪಿ, ಫೆ.22: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಇಲ್ಲಿನ ಮೀನುಗಾರರ ಮೇಲೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮೀನುಗಾರರು ಹಲ್ಲೆ ನಡೆಸಿದ್ದಲ್ಲದೇ, ದೋಣಿಗಳಿಗೆ ಹಾನಿಯೆಸಗಿದ್ದನ್ನು ವಿರೋಧಿಸಿ ಮಲ್ಪೆಯ ಮೀನುಗಾರರು ಇಂದು ಬಂದರಿನಲ್ಲಿ ಪ್ರತಿಭಟನೆ ನಡೆಸಿದರು.

ಮಲ್ಪೆ ಡೀಪ್ ಸೀ ಬೋಟ್ ತಾಂಡೇಲರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯ ಮೀನುಗಾರರು ಹಾಗೂ ಮೀನುಗಾರಿಕೆಯನ್ನು ನಂಬಿರುವ ಇತರ ಉದ್ಯೋಗಿಗಳು ಪಾಲ್ಗೊಂಡಿದ್ದರು.
ಮಲ್ಪೆ ಬಂದರಿನ ಆಳ ಸಮುದ್ರ ಬೋಟ್‌ನ ಮೀನುಗಾರರು ಸಾಮಾನ್ಯ ವಾಗಿ ಉತ್ತರದ ದಿಕ್ಕಿಗೆ ಮೀನುಗಾರಿಕೆಗೆ ತೆರಳುತ್ತಿದ್ದು, ಕಳೆದ ಎರಡು ವರ್ಷ ಗಳಿಂದ ಸತತವಾಗಿ ರತ್ನಗಿರಿ ಜಿಲ್ಲೆಯ ಪರ್ಸಿನ್ ಬೋಟ್‌ನವರಿಂದ ಹಲ್ಲೆಗೆ ತುತ್ತಾಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ರಾಜ್ಯ ಬಿಟ್ಟು ಉಳಿದ ದೋಣಿಗಳು 12 ನಾಟಿಕಲ್ ಮೈಲ್ ದೂರದಲ್ಲಿ ಮಾತ್ರ ಮೀನುಗಾರಿಕೆ ನಡೆಸಬೇಕೆಂಬ ಕಾನೂನು ಗೋವಾ ಮತ್ತು ಮಹಾರಾಷ್ಟ್ರ ಗಳಲ್ಲಿ ಮಾತ್ರ ಜಾರಿಯಲ್ಲಿದೆ. ನಮ್ಮಲ್ಲಿ ಅವು ಜಾರಿಯಾಗುತ್ತಿಲ್ಲ. ಅಲ್ಲಿನ ಮೀನುಗಾರರು ತಲವಾರು, ಚಾಕು ಹಿಡಿದುಕೊಂಡು ಬಂದು ಬೆದರಿಕೆ ಹಾಕಿ ನಮ್ಮ ಮೊಬೈಲ್, ಹಣ ದೋಚುತ್ತಾರೆ ಎಂದು ಮೀನುಗಾರರು ದೂರಿದರು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತ ನಾಡಿದ ಉದ್ಯಮಿ ಹಾಗೂ ಮೀನು ಗಾರ ಮುಖಂಡ ಪ್ರಮೋದ್ ಮಧ್ವರಾಜ್, ಗೋವಾ ಮತ್ತು ಮಹಾರಾಷ್ಟ್ರಗಳ ಮೀನುಗಾರರು ನೆಲದ ಕಾನೂನನ್ನು ಉಲ್ಲಂಘಿಸಿ ರಾಜ್ಯದ ಮೀನುಗಾರರ ಮೇಲೆ ಹಲ್ಲೆ ನಡೆಸು ತ್ತಿರುವುದು ನಿರಂತರವಾಗಿ ಮುಂದು ವರಿದಿದೆ. ಕಳೆದ ಬಾರಿ ಇದೇ ರೀತಿ ನಡೆದಾಗ ಮಹಾರಾಷ್ಟ್ರ ಸರಕಾರ, ಕಂದಾಯ ಇಲಾಖೆಯೊಂದಿಗೆ ಮಾತು ಕತೆ ನಡೆಸಿ ಇತ್ಯರ್ಥಗೊಳಿಸಲಾಗಿತ್ತು ಎಂದರು.

ಈ ಬಾರಿಯೂ ಸಮಸ್ಯೆ ಇತ್ಯರ್ಥ ಕ್ಕಾಗಿ ಮಹಾರಾಷ್ಟ್ರ ಸರಕಾರದೊಂದಿಗೆ ಮಾತುಕತೆಗೆ ಪ್ರಯತ್ನ ನಡೆದಿದೆ. ಆಸ್ಕರ್ ಫೆರ್ನಾಂಡಿಸ್ ಮೂಲಕ ಮಹಾರಾಷ್ಟ್ರದ ಸರಕಾರದ ಗಮನಕ್ಕೆ ಈ ವಿಷಯವನ್ನು ತರಲಾಗುವುದು. 12 ನಾಟಿಕಲ್‌ಗಿಂತ ಮುಂದೆ ಮೀನು ಗಾರಿಕೆಗೆ ಮುಕ್ತ ಅವಕಾಶ ನೀಡಬೇಕು. ಈ ಬಗ್ಗೆ ಹೊಸ ನೀತಿ ಜಾರಿಗೊಳಿಸಬೇಕು ಎಂದವರು ಒತ್ತಾಯಿಸಿದರು.
ಸಭೆಯನ್ನುದ್ದೇಶಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಉದಯಕುಮಾರ್ ಶೆಟ್ಟಿ, ತಾಂಡೇಲರ ಸಂಘದ ಅಧ್ಯಕ್ಷ ಶಶಿಧರ ಸಾಲ್ಯಾನ್, ಕಾರ್ಯದರ್ಶಿ ರಾಮ ಅಮೀನ್, ಮಾಜಿ ಅಧ್ಯಕ್ಷ ರವಿ ಸಾಲ್ಯಾನ್, ನಗರಸಭಾ ಸದಸ್ಯ ಪಾಂಡುರಂಗ ಮಲ್ಪೆ, ಸತೀಶ್ ಅಮೀನ್ ಪಡುಕೆರೆ ಮುಂತಾದವರು ಮಾತನಾಡಿದರು.

ನಾವು ಉತ್ತರದ ದಿಕ್ಕಿಗೆ ಮೀನು ಗಾರಿಕೆಗೆಂದು ತೆರಳುವಾಗ ನಮ್ಮ ಜೀವಕ್ಕೆ ಹಾಗೂ ಬೋಟ್‌ಗೆ ಸೂಕ್ತ ರಕ್ಷಣೆ ಒದಗಿಸಿ ಮುಕ್ತವಾಗಿ ಮೀನುಗಾರಿಕೆ ನಡೆಸಲು ನಮಗೆ ಅವಕಾಶ ಮಾಡಿಕೊಡಬೇಕು. ಕಳೆದ ಎರಡು ವರ್ಷಗಳಿಂದ ಆಗಾಗ ಪುನರಾ ವರ್ತಿತವಾಗುತ್ತಿರುವ ಈ ಸಮಸ್ಯೆ ಪರಿಣಾಮಕಾರಿಯಾಗಿ ಇತ್ಯರ್ಥ ಗೊಳ್ಳುವವರೆಗೆ ನಾವು ಡೀಪ್ ಸೀ ಟ್ರಾಲ್‌ಬೋಟ್ ಮೀನುಗಾರಿಕೆಗೆ ತೆರಳದೇ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ ಎಂದು ಸಂಘದ ಪರವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಲಾ ಗಿರುವ ಮನವಿಯಲ್ಲಿ ತಿಳಿಸಲಾಗಿದೆ.

12ಕ್ಕೂ ಅಧಿಕ ದೋಣಿಗಳಿಗೆ ಹಾನಿ
ರತ್ನಗಿರಿಯಲ್ಲಿ ಮಲ್ಪೆ ಬಂದರಿನ ಮೀನುಗಾರರ ಮೇಲೆ ಅಲ್ಲಿನ ಮೀನು ಗಾರರು ಹಲ್ಲೆ ನಡೆಸಿದ್ದಲ್ಲದೇ ಬೋಟ್‌ನಲ್ಲಿದ್ದ ಮೀನು, ಮೀನುಗಾರಿಕೆಗೆ ಸಂಬಂಧಿಸಿದ ಬೆಳೆಬಾಳುವ ಉಪಕರಣ, ಮೊಬೈಲ್ ಹಾಗೂ ನಗದು ಹಣವನ್ನು ಲೂಟಿ ಮಾಡಿದ್ದಾರೆ ಎಂದು ಮಲ್ಪೆ ಡೀಪ್ ಸೀ ಬೋಟ್ ತಾಂಡೇಲರ ಸಂಘದ ಅಧ್ಯಕ್ಷ ಶಶಿಧರ ಸಾಲ್ಯಾನ್ ತಿಳಿಸಿದ್ದಾರೆ.
ಸರಕಾರದ ಆದೇಶದಂತೆ ಸಮುದ್ರ ತಟದಿಂದ 12 ನಾಟಿಕಲ್ ಮೈಲ್ ದೂರದಲ್ಲಿ ತಾವು ಮೀನುಗಾರಿಕೆ ನಡೆಸುತ್ತಿದ್ದರೂ ಫೆ.19ರಂದು ರತ್ನಗಿರಿಯ ಪರ್ಸಿನ್ ಬೋಟುಗಳಲ್ಲಿನವರು ಮಲ್ಪೆಯ ಡೀಪ್ ಸೀ ಟ್ರಾಲ್ ಬೋಟು ಗಳಾದ ಜಲದೀಕ್ಷಾ, ಜಲರಕ್ಷಾ, ದುರ್ಗಾಮಾಯಿ, ಶ್ರವಣ್, ಸೀಫೋನ್, ಸೀ ಫರ್ಲಾ, ಸುಕನ್ಯಾ, ರಾಜ್‌ದೀಪ್, ನವಮಾಲಿಕ್, ಸನ್ನಿಧಿ, ದುರ್ಗಾದೇವಿ ಸೇರಿದಂತೆ ಸುಮಾರು 12 ಬೋಟುಗಳ ಮೇಲೆ ದಾಳಿ ನಡೆಸಿ ಅವುಗಳಿಗೆ ಹಾನಿಯನ್ನುಂಟು ಮಾಡಿದ್ದಾರೆ. ಬೋಟುಗಳಲ್ಲಿದ್ದ ವೆಂಕಟೇಶ್ ಭಟ್ಕಳ್, ನಾಗೇಶ್ ಭಟ್ಕಳ್, ಗಣಪತಿ ಭಟ್ಕಳ್, ಪರಮೇಶ್ವರ, ಜಗನ್ನಾಥ್, ಶೇಖರ ಕೋಟ್ಯಾನ್ ಮಲ್ಪೆ, ನಾರಾಯಣ ಭಟ್ಕಳ, ಹೊನ್ನಪ್ಪ ಮೊದಲಾದವರಿಗೆ ಹಲ್ಲೆಯಿಂದ ಗಾಯಗಳಾಗಿವೆ ಎಂದು ಮೀನುಗಾರರು ತಿಳಿಸಿದ್ದಾರೆ.

ಕಡಲಿಗಿಳಿಯದ ಬೋಟ್
ಮಲ್ಪೆಯ ಹೆಚ್ಚಿನೆಲ್ಲಾ ಡೀಪ್ ಸೀ ಬೋಟ್‌ಗಳು ಇಂದು ಮಲ್ಪೆ ಬಂದರಿನೊಳಗೆ ಲಂಗರು ಹಾಕಿವೆ. ನಮಗೆ ಭದ್ರತೆಯ ಭರವಸೆ ನೀಡದೆ ಮೀನುಗಾರಿಕೆಯನ್ನು ಆರಂಭಿಸಲು ಹೆದರಿಕೆಯಾಗುತ್ತದೆ ಎಂದು ಮೀನುಗಾರರು ತಿಳಿಸಿದ್ದಾರೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಯುರೋಪಿನಲ್ಲಿ ಬದಲಾವಣೆಯ ಹೊಸ ಗಾಳಿ

ಯುರೋಪಿನಲ್ಲಿ ಈಗ ಬದಲಾವಣೆಯ ಗಾಳಿ ಬೀಸತೊಡಗಿದೆ. ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕ ಬಿಕ್ಕಟ್ಟು ಆ ಭೂಭಾಗದ ನಾಲ್ಕು ಪ್ರದೇಶಗಳಲ್ಲಿ ನಡೆದ ಚುನಾವಣೆಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್

ಮತ್ತೆ ಹಿಂದುತ್ವದ ಹುನ್ನಾರ

ಅಧಿಕಾರ ರಾಜಕಾರಣ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ರಾಜಸ್ಥಾನ, ಉತ್ತರಖಂಡ, ಕರ್ನಾಟಕ ಹ ...


- ಸನತ್‌ಕುಮಾರ ಬೆಳಗಲಿ