mail-img print-img

ಹಿಂಸಾರೂಪ ಪಡೆದ ವಿದ್ಯಾರ್ಥಿಗಳ ಪ್ರತಿಭಟನೆ ಲಾಠಿ ಚಾರ್ಜ್, ಕಾಲೇಜಿಗೆ ಹಾನಿ, ಹುದ್ದೆಯಿಂದ ಅಧಿಕಾರಿ ಅಮಾನತು

ಗುರುವಾರ - ಮಾರ್ಚ್ -20-2014

ಉಳ್ಳಾಲ,ಮಾ.19: ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ವಿರುದ್ಧ ಎರಡನೆ ಬಾರಿ ನಡೆಸಿದ ಪ್ರತಿಭಟನೆ ಹಿಂಸಾರೂಪ ಪಡೆದಿದ್ದು, ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ಕೊಣಾಜೆಯ ನಡುಪದವು ಪಿ.ಎ. ಕಾಲೇಜಿನಲ್ಲಿ ಬುಧವಾರ ಸಂಭವಿಸಿದೆ. ಪ್ರತಿಭಟನೆಗೆ ಮಣಿದ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ (ಸ್ಟೂಡೆಂಟ್ ವೆಲ್ಫೇರ್ ಆಫಿಸರ್) ಅಬ್ದುರ್ರಹ್ಮಾನ್‌ರನ್ನು ಎಲ್ಲಾ ಹುದ್ದೆಗಳಿಂದ ಅಮಾನತುಗೊಳಿಸಿದೆ. ಘಟನೆ ವಿವರ:            
 
ಮಾ.15ರಂದು ಕಾಲೇಜಿನಲ್ಲಿ ಹಾಗೂ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯ ಕೊರತೆ, ಕಳಪೆ ಆಹಾರ ಪೂರೈಕೆ ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯ ದುರ್ವರ್ತನೆ ವಿರುದ್ಧ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿ ದ್ದರು. ಈ ಸಂದರ್ಭ ಮಾ.19ರ ಗಡುವು ನೀಡಿ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು ಎನ್ನಲಾಗಿದ್ದು ಅದರಂತೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಿಲ್ಲಿಸಿ ತರಗತಿಗೆ ಹಾಜರಾಗಿದ್ದರು. ಕಾಲೇಜು ಆಡಳಿತ ಮಂಡಳಿ ಕ್ಷೇಮಪಾಲನಾ ಅಧಿಕಾರಿ ಅಬ್ದುರ್ರಹ್ಮಾನ್‌ರನ್ನು ಹುದ್ದೆಯಿಂದ ತೆಗೆದು ಡಿಪ್ಲೊಮಾ ಕಾಲೇಜಿನ ಪ್ರಾಂಶುಪಾಲರಾಗಿ ಮುಂದುವರಿಯಲು ತೀರ್ಮಾನಿಸಿತ್ತು. ಆದರೆ ಪ್ರಾಂಶುಪಾಲ ಹುದ್ದೆ ಯಿಂದಲೂ ತೆಗೆಯುವಂತೆ ಒತ್ತಾಯಿಸಿದ ವಿದ್ಯಾರ್ಥಿಗಳು ಬುಧವಾರ ಕಾಲೇಜಿನ ಮುಖ್ಯದ್ವಾರದ ರಸ್ತೆಯಿಂದ ಕಾಲೇಜಿನವರೆಗೂ ಅಬ್ದುರ್ರಹ್ಮಾನ್‌ರನ್ನು ವಜಾಗೊ ಳಿಸುವಂತೆ ಆಗ್ರಹಿಸಿದ ಭಿತ್ತಿಪತ್ರಗಳನ್ನು ಅಂಟಿಸಿದ್ದರು ಎನ್ನಲಾಗಿದ್ದು, ಕಾಲೇಜು ಆವರಣದೊಗೆ ಪ್ರತಿಭಟನೆ ನಡೆಸಲು ಆರಂಭಿಸಿದ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಲು ಆರಂಭಿಸಿದಾಗ, ಕೊಣಾಜೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿ ಉದ್ರಿಕ್ತ ವಿದ್ಯಾರ್ಥಿಗಳನ್ನು ಕಾಲೇಜು ಆವರಣದೊಳಗಿನಿಂದ ಹೊರ ಓಡಿಸಿದರು ಎನ್ನಲಾಗಿದ್ದು, ಅಲ್ಲಿಯೂ ಸುಮ್ಮನಾಗದ ವಿದ್ಯಾರ್ಥಿಗಳು ಕಾಲೇಜು ನಾಮಫಲಕಕ್ಕೆ, ಕಾವಲುಗಾರ ಕೊಠಡಿಯ ಕಿಟಕಿ ಗಾಜುಗಳಿಗೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದರು ಎಂದು ಆರೋಪಿಸಲಾಗಿದೆ. ಪೊಲೀಸ್ ಇಲಾಖೆ ವತಿಯಿಂದ ವೀಡಿಯೊ ಚಿತ್ರೀಕರಣ ನಡೆಸುತ್ತಿದ್ದ ವೀಡಿಯೊಗ್ರಾಫರ್‌ರಿಗೂ ಹಲ್ಲೆ ನಡೆಸಿದರು ಎನ್ನಲಾಗಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿದ ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯ ಗೊಂಡರು. ಎರಡು ಗಂಟೆಗಳ ಕಾಲ ಆವರಣದ ಹೊರಗಡೆಯೇ ನಿಂತ ಉದ್ರಿಕ್ತ ವಿದ್ಯಾರ್ಥಿಗಳು ಘೋಷಣೆ ಗಳನ್ನು ಕೂಗುತ್ತಲೇ ಇದ್ದರು ಎನ್ನಲಾಗಿದ್ದು, ಸ್ಥಳಕ್ಕೆ ಕೆಎಸ್‌ಆರ್‌ಪಿ ತುಕಡಿಯನ್ನು ಕರೆಸಲಾಯಿತು. ಎಸಿಪಿ ಭೇಟಿ:           ಘಟನೆ ಗಂಭೀರತೆ ಅರಿತು ಸ್ಥಳಕ್ಕೆ ಭೇಟಿ ನೀಡಿದ ಎಸಿಪಿ ಪ್ರವೀಣ್ ನೆಜ್ಜೂರು ಉದ್ರಿಕ್ತ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರು. ಆದರೆ ವಿದ್ಯಾರ್ಥಿಗಳು ಕಾಲೇಜಿನಿಂದ ಅಬ್ದುರ್ರಹ್ಮಾನ್‌ರನ್ನು ವಜಾಗೊಳಿಸುವವರೆಗೆ ಪ್ರತಿಭಟನೆ ಹಿಂದೆಗೆಯುವುದಿಲ್ಲ ಎಂದುಪಟ್ಟು ಹಿಡಿದರು. ಬಳಿಕ ಕಾಲೇಜು ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದ ಎಸಿಪಿ, ಅಬ್ದುರ್ರಹ್ಮಾನ್‌ರನ್ನು ಎಲ್ಲಾ ಹುದ್ದೆಗಳಿಂದ ಅಮಾನತು ಗೊಳಿಸುವ ನಿರ್ಧಾರಕ್ಕೆ ಬಂದರು. ಅದನ್ನು ವಿದ್ಯಾರ್ಥಿಗಳ ಮುಂದೆ ಆಡಳಿತಾಧಿಕಾರಿ ಆರ್.ಜೆ ಡಿಸೋಜ ಹೇಳದ ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂದೆಗೆದುಕೊಂಡು ಎಂದು ಮೂಲಗಳು ತಿಳಿಸಿವೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   ಸಂಪಾದಕೀಯ

ಭೂಕಂಪದಲ್ಲಿ ಪ್ರತ್ಯಕ್ಷಗೊಂಡ ನಡೆದಾಡುವ ಶವಗಳು

ಸ್ಮಶಾನ ವೈರಾಗ್ಯ ಎನ್ನೋದೊಂದು ಪದ ನಮ್ಮಲ್ಲಿದೆ. ಕನಿಷ್ಠ ಸ್ಮಶಾನದಲ್ಲಾದರೂ ಒಂದಿಷ್ಟು ಕಾಲ ವೈರಾಗ್ಯವನ್ನು ಪ್ರದರ್ಶಿಸುವ ವಷ್ಟು ಮನುಷ್ಯ ಸಂವೇದನಾಶೀಲರ ...


ನಿಮ್ಮ ಅನಿಸಿಕೆ

postClick here to post your views
EPAPER
access

ಅ.ರಾ.ಸೇ ನೆನಪುಗಳು

ಇತ್ತೀಚೆಗೆ ನಮ್ಮನ್ನು ಅಗಲಿದ ಅ.ರಾ.ಸೇ ಎಂಬ ಮೂರು ಅಕ್ಷರಗಳಿಂದ ಜನಪ್ರಿಯರಾದ ಅಣಜಿ ರಾಮಪ್ಪ ಸೇತುರ ...


- ಎನ್. ಎಸ್. ಶ್ರೀಧರ ಮೂರ್ತಿ

ಸ್ಲಮ್ ಸಂಖ್ಯೆಯಲ್ಲಿಕಡಿತ!ಗಸ್ತು-ಸುಸ್ತು...

img7

ಸ್ಲಮ್‌ಗಳ ಸಂಖ್ಯೆ ಕಡಿಮೆ ತೋರಿಸುವ ಮುಂಬೈ ಮನಪಾ!
ಮುಂಬೈ ಮಹಾನಗರ ಎಂದೊಡನೆ ತಟ್ಟನೆ ನೆನಪಿಗೆ ಬರುವುದ ...


ಸ್ಲಮ್ ಸಂಖ್ಯೆಯಲ್ಲಿಕಡಿತ!ಗಸ್ತು-ಸುಸ್ತು...

img7

ಸ್ಲಮ್‌ಗಳ ಸಂಖ್ಯೆ ಕಡಿಮೆ ತೋರಿಸುವ ಮುಂಬೈ ಮನಪಾ!
ಮುಂಬೈ ಮಹಾನಗರ ಎಂದೊಡನೆ ತಟ್ಟನೆ ನೆನಪಿಗೆ ಬರುವುದ ...


'ಬಿಬ್ಲಿಯೋಫಿಲಿ' ಅಂದ್ರೇನು ಗೊತ್ತಾ?

“Ideally a book would have no order to it, and the reader would have to discover his own”

ನಗರದ ಒಂದಷ್ಟು ಪುಸ್ತಕದಂಗಡಿಗಳಿಗೆ ಸತತವಾಗ ...


- ಸಂಯುಕ್ತಾ ಪುಲಿಗಳ್

ಯೆಚೂರಿ ಎಂಬ ಭರವಸೆಯ ಬೆಳಕು

img7

ದೇಶದಲ್ಲಿ ಫ್ಯಾಸಿಸ್ಟ್ ಕತ್ತಲು ಆವರಿಸಿದಾಗ, ಎಡಪಕ್ಷಗಳು ಮಾತ್ರವಲ್ಲ ಎಲ್ಲಾ ಜಾತ್ಯತೀತ ಜನಪರ ಶಕ್ತಿಗಳ ...


ತುಣುಕು-ಮಿಣುಕು

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹೀಗೆ ಬಂದು, ಹಾಗೆ ಹೋಯ್ತು. ಎಪ್ರಿಲ್ 15ರ ಎಲ್ಲ ಆಂಗ್ಲ ದಿನಪತ್ರ ...


ಅಕ್ಷಯ ತೃತೀಯಾ ಸಂಭ್ರಮವೂ...ರೈತಾಪಿಗಳ ದಿಗ್ಭ್ರಮೆಯೂ...

img7

ಪಿ.ಕೆ. ಮಲ್ಲನ ಗೌಡರ್
ಆಮ್ ಆದ್ಮಿ ಪಾರ್ಟಿಯ ರ್ಯಾಲಿಯಲ್ಲಿ ಗಜೇಂದ್ರ ಸಿಂಗ್ ಎಂಬ ರೈತ ನೇಣಿಗ ...


ಆರ್‌ಜಿ 2.0!

img7

ರಾಹುಲ್ ಗಾಂಧಿಯ ‘ಘರ್ ವಾಪಸಿ’ ಸಂಚಲನ ಎಬ್ಬಿಸಿದೆ. ಲೋಕಸಭೆ ಯಲ್ಲಿ ಮಾಡಿದ ಕಿರು ಭಾಷಣಗಳಿಗಾಗಿ ಎರಡು ದ ...