ಮರೆಯಾದ ಗಝಲ್ ಲೋಕದ ಮಿನುಗುತಾರೆ: ಶಹ್ರಾರ್
mail-img print-img

ಮರೆಯಾದ ಗಝಲ್ ಲೋಕದ ಮಿನುಗುತಾರೆ: ಶಹ್ರಾರ್

ಗುರುವಾರ - ಫೆಬ್ರವರಿ -23-2012

‘‘ದಿ ಲ್ ಚೀಝ್ ಕ್ಯಾ ಹೈ’’.ಉಮ್ರಾವ್ ಜಾನ್ ಚಿತ್ರದ ಈ ಗಝಲ್ ಹಾಡು ಈಗಲೂ ಚಿತ್ರರಸಿಕರನ್ನು ಮಂತ್ರಮುಗ್ಧಗೊಳಿಸುತ್ತಿದೆ.ಗಾಯಕಿ ಆಶಾಭೋಂಸ್ಲೆಗೆ ಈ ಹಾಡಿಗಾಗಿ ಶ್ರೇಷ್ಠ ಗಾಯಕಿಯೆಂಬ ರಾಷ್ಟ್ರಪುರಸ್ಕಾರವೂ ದೊರೆತಿತ್ತು.ಈ ಅತ್ಯಂತ ಮಾಧುರ್ಯಭರಿತ ಹಾಡನ್ನು ಬರೆದ ಸಾಹಿತಿ ಅಖ್‌ಲಾಖ್ ಮುಹಮ್ಮದ್ ಖಾನ್ ಕಳೆದ ಸೋಮವಾರ ಅಲಿಘರ್‌ನಲ್ಲಿ ಕೊನೆಯುಸಿರೆಳೆದಾಗ,ಭಾರತೀಯ ಸಂಗೀತ ಲೋಕದಿಂದ ಒಂದು ಅಪೂರ್ವ ಮಿನುಗುತಾರೆ ಕಣ್ಮರೆಯಾದಂತಾಯಿತು.ಕಾನ್ಸರ್ ರೋಗದ ವಿರುದ್ಧ ಸುದೀರ್ಘ ಹೋರಾಟ ನಡೆಸಿದ ಅಖ್‌ಲಾಖ್ ನಿಧನವು ಭಾರತದ ಗಝಲ್ ಸಾಹಿತ್ಯ ಲೋಕವನ್ನು ಶೋಕತಪ್ತಗೊಳಿಸಿದೆ.‘ಶಾಹ್‌ರ್ಯಾರ್’ ಎಂದೇ ಜನಪ್ರಿಯರಾದ ಅಖ್‌ಲಾಖ್ ಮುಹಮ್ಮದ್ ಖಾನ್, 1981ರಲ್ಲಿ ತೆರೆಕಂಡ ‘ಉಮ್ರಾವ್ ಜಾನ್’ ಚಿತ್ರದ ಅವಿ ಸ್ಮರಣೀಯ ಹಾಡುಗಳ ಸಾಹಿತ್ಯಗಳಿಂದ ಚಿತ್ರ ಪ್ರೇಮಿಗಳ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ.ಕವಿಯಾಗಿ ಅವರು ಉರ್ದು ಭಾಷೆಯ ಶ್ರೀಮಂತಿಕೆಯನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟವರು.

ಉರ್ದು ಕಾವ್ಯ ಕ್ಷೇತ್ರದಲ್ಲಿ ತುಂಬು ಪಾಂಡಿತ್ಯ ವಿದ್ದ ಅಖ್‌ಲಾಖ್‌ಗೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಅಕಾಡಮಿಕ್ ವಲಯದಲ್ಲೂ ಅಪಾರ ಗೌರವವಿತ್ತು.ಬಾಲಿವುಡ್‌ನಲ್ಲಿ ಅವಕಾಶಗಳನ್ನು ಪಡೆಯಲು ಅಖ್‌ಲಾಖ್‌ಗೆ ತನ್ನ ಮನೆಯ ವಿಳಾಸವನ್ನು ಮುಂಬೈಗೆ ಬದಲಾಯಿಸಬೇಕಾದ ಅಗತ್ಯ ಬರಲಿಲ್ಲ.ಬದಲಿಗೆ ನಿರ್ಮಾಪಕರೇ ಅಲಿಘರ್‌ನಲ್ಲಿರುವ ಅವರ ಮನೆಗೆ ಚಿತ್ರಕಥೆಯನ್ನು ಹಿಡಿದುಕೊಂಡೇ ಬರುತ್ತಿದ್ದರು.ಉರ್ದುವಿನ ವಿಶಿಷ್ಟ ಕಾವ್ಯಗೋಷ್ಠಿಗಳಾದ ಮುಶೈರಾಗಳಲ್ಲಿಯೂ ಅಖ್‌ಲಾಖ್ ಭಾರೀ ಜನಪ್ರಿಯರಾಗಿದ್ದರು.

ಅವರ ಖ್ಯಾತ ಕವನ ಸಂಗ್ರಹ ‘ಖ್ವಾಬ್ ಕಾ ದರ್ ಬಂದ್ ಹೈ’ಗೆ 2007ರಲ್ಲಿ ಸಾಹಿತ್ಯ ಅಕಾಡಮಿ ಪುರಸ್ಕಾರ ಲಭಿಸಿದರೆ, 2008ರಲ್ಲಿ ಜ್ಞಾನ ಪೀಠ ಪ್ರಶಸ್ತಿ ಒಲಿದಿತ್ತು.ಬಾಲಿವುಡ್‌ನಲ್ಲಂತೂ ಶಾಹ್ರಾರ್‌ರನ್ನು ಯಶಸ್ಸು ಹಾಗೂ ಖ್ಯಾತಿ ಸದಾ ಹಿಂಬಾಲಿಸಿ ಕೊಡೇ ಬಂದಿತ್ತು.‘ಫಾಸ್ಲೆ’ ಚಿತ್ರದಲ್ಲಿ ಅದ್ಭುತ ವಾದ ಹಾಡುಗಳನ್ನು ಬರೆದ ಬಳಿಕವಂತೂ ಶಾಹ್ರಾರ್‌ರನ್ನು ನಿರ್ಮಾಪಕ ಯಶ್‌ಚೋಪ್ರಾ ತನ್ನ ಮುಂದಿನ ಮೂರು ಚಿತ್ರಗಳಿಗೂ ಗೀತರಚನಕಾರರಾಗಿ ಆಯ್ಕೆ ಮಾಡಿದರು.ಆದರೆ ಶಾಹ್ರಾರ್ ಯಾವತ್ತೂ ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಹಾಡುಗಳನ್ನು ಸಿದ್ಧಪಡಿಸುವ ಒಂದು ‘‘ರೆಡಿಮೇಡ್ ಅಂಗಡಿ’’ಯಾಗಲು ಸಿದ್ಧರಿರಲಿಲ್ಲ.ಅವರು ಯಾವತ್ತೂ ಕೆಲಸದಲ್ಲಿ ಏಕಾಂತತೆ ಹಾಗೂ ಸಾವಕಾಶವನ್ನು ಇಷ್ಟಪಡುತ್ತಿದ್ದರು. ಅವರ ಕವನಗಳು ಬರೀ ಶೃಂಗಾರರಸದಿಂದ ತುಂಬಿದವಾಗಿರಲಿಲ್ಲ.ಅವುಗಳಲ್ಲಿ ದಮನಿತರ,ಶೋಷಿತರ ನೋವುಗಳ ಛಾಯೆಯಿದ್ದವು.ಅನಾಥರ ಬಗ್ಗೆ ಸಾಮಾಜಿಕ ಕಳಕಳಿಗಳಿದ್ದವು.ಇವೆಲ್ಲವೂ ಅವರ ಗಝಲ್ ಹಾಡುಗಳಲ್ಲಿ ಅತ್ಯಂತ ಹೃದಯಂಗಮವಾಗಿ ಮೂಡಿಬಂದಿವೆ.

ಶಹ್ರಾರ್‌ರ ಖ್ಯಾತ ಗಝಲ್ ಹಾಡು ‘‘ಸೀನೆ ಮೆ ಜಲಾನ್ ಅಂಖೋ ಮೆ ತೂಫಾನ್ ಸಾ ಕ್ಯೂ ಹೈ’’ ಶೋಷಿತರ ನೋವು ಆಕ್ರೋಶವನ್ನು ಅತ್ಯಂತ ಮಾರ್ಮಿಕವಾಗಿ ಬಿಂಬಿಸಿದೆ. 1978ರಲ್ಲಿ ಬಿಡುಗಡೆಗೊಂಡ ಗಮನ್ ಚಿತ್ರದಲ್ಲಿ ಈ ಗಝಲನ್ನು ಅಳವಡಿಸಲಾಗಿದ್ದು,ಅದು ಭಾರೀ ಜನಪ್ರಿಯವಾಗಿತ್ತು.ಶಾಹ್‌ರ್ಯಾರ್ ತನ್ನ ಬಾಲ್ಯದ ದಿನಗಳಲ್ಲಿ ಶ್ರೇಷ್ಠ ಅಥ್ಲೆಟಿಕ್ ಆಗಬೇಕೆಂಬ ಕನಸುಕಂಡವರು. ಅವರ ತಂದೆಗೆ ಮಗ ಪೊಲೀಸ್ ಅಧಿಕಾರಿಯಾಗ ಬೇಕೆಂಬ ಹಂಬಲ.ಈ ವಿಷಯದಲ್ಲಿ ತಂದೆ ಮತ್ತು ಮಗ ಇಬ್ಬರ ನಡುವೆ ವಿರಸ ಬಂದಾಗ ಶಹ್ರಾರ್ ಮನೆ ಬಿಟ್ಟು ಓಡಿದರು. ಆಗಿನ ಖ್ಯಾತ ಉರ್ದು ಕವಿ ಖಲೀಲು ಉರ್ ರ್ರಹ್ಮಾನ್‌ರ ಮನೆಯಲ್ಲಿ ಆಶ್ರಯಪಡೆದಿದ್ದ ಸಮಯದಲ್ಲಿ ಅವರಿಗೆ ಕಾವ್ಯ ಜಗತ್ತಿನ ಪರಿಚಯವುಂಟಾಯಿತು. ಖಲೀಲುರ್ರಹ್ಮಾನ್‌ರ ಮಾರ್ಗ ದರ್ಶನದಲ್ಲಿ ಶಹ್ರಾರ್ ನಿಧಾನವಾಗಿ ಓರ್ವ ಪ್ರತಿಭಾವಂತ ಕವಿಯಾಗಿ ರೂಪುಗೊಂಡರು.

ಆದರೆ ಜೀವನೋಪಾಯಕ್ಕಾಗಿ ಅವರು ಅಲಿಘರ್ ಮುಸ್ಲಿಂ ವಿವಿಯಲ್ಲಿ ಉರ್ದು ಕಥಾ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದರು.ಶಹ್ರಾರ್ ಮಹಾನ್ ಕವಿಯಾಗಿದ್ದರೂ, ಅವರು ಎಂದಿಗೂ ವಿಶ್ವವಿದ್ಯಾನಿಲಯಗಳಲ್ಲಿ ಕಾವ್ಯ ಸಾಹಿತ್ಯವನ್ನು ಬೋಧಿಸಿದವರಲ್ಲ.ಕವನ ರಚನೆಯನ್ನು ಯಾರಿಗೂ ಕಲಿಸಕೂಡದು.ಅದು ವ್ಯಕ್ತಿಯ ಅಂತರಂಗದ ಭಾವನೆಗಳ ಮೂಲಕವೇ ಹೊರಹೊಮ್ಮಬೇಕೆಂದು ಅವರು ಪ್ರತಿಪಾದಿಸುತ್ತಾರೆ.ಅಲಿಘರ್ ಮುಸ್ಲಿಂ ವಿವಿಯ ಉರ್ದು ವಿಭಾಗದ ಅಧ್ಯಕ್ಷರಾಗಿ ನಿವೃತ್ತರಾದ ಶಾಹ್ರಾರ್, ಆ ಪ್ರತಿಷ್ಟಿತ ವಿದ್ಯಾಕೇಂದ್ರದ ಘನತೆ, ಗೌರವಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದರು.ಶಹ್ರಾರ್‌ರ ಚೊಚ್ಚಲ ಕವನ ಸಂಗ್ರಹ ‘ಇಶ್ಮೆ ಆಝಾಂ’ 1965ರಲ್ಲಿ ಪ್ರಕಟವಾಯಿತು.ಉರ್ದು ಸಾಹಿತ್ಯದ ಕುರಿತಾದ ಪತ್ರಿಕೆ ‘ಶೇರೋ ಹಿಕಾಮತ್’ನ ಸಹಸಂಪಾದಕರಾಗಿಯೂ ಅವರು ದುಡಿದಿದ್ದರು.

ಇನ್ನಷ್ಟೇ ಬಿಡುಗಡೆಯಾಗಲಿರುವ ಮುಝಾಫರ್ ಅಲಿ ನಿರ್ದೇಶನದ ನೂತನ ಚಿತ್ರ ‘ನೂರ್‌ಜಹಾನ್’ಗೂ ಅವರು ಹಾಡುಗಳನ್ನು ರಚಿಸಿದ್ದಾರೆ.ಶಾಹ್ರಾರ್ ಇಂದು ನಮ್ಮಾಡನಿಲ್ಲವಾದರೂ, ಅವರು ಬರೆದು ಹೋಗಿರುವ ಹಾಡುಗಳು ಈ ಮಹಾನ್ ಕವಿಯ ನೆನಪನ್ನು ಅಜರಾಮರಗೊಳಿಸಿವೆ.




Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಯುರೋಪಿನಲ್ಲಿ ಬದಲಾವಣೆಯ ಹೊಸ ಗಾಳಿ

ಯುರೋಪಿನಲ್ಲಿ ಈಗ ಬದಲಾವಣೆಯ ಗಾಳಿ ಬೀಸತೊಡಗಿದೆ. ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕ ಬಿಕ್ಕಟ್ಟು ಆ ಭೂಭಾಗದ ನಾಲ್ಕು ಪ್ರದೇಶಗಳಲ್ಲಿ ನಡೆದ ಚುನಾವಣೆಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್

ಮತ್ತೆ ಹಿಂದುತ್ವದ ಹುನ್ನಾರ

ಅಧಿಕಾರ ರಾಜಕಾರಣ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ರಾಜಸ್ಥಾನ, ಉತ್ತರಖಂಡ, ಕರ್ನಾಟಕ ಹ ...


- ಸನತ್‌ಕುಮಾರ ಬೆಳಗಲಿ