mail-img print-img

ದುಬೈ ಅಭಯಾರಣ್ಯದಲ್ಲಿ : ಪರಿಸರ ಶೋಧ ಕಾರ್ಯಕ್ರಮ

ಶುಕ್ರವಾರ - ಫೆಬ್ರವರಿ -10-2012

ದುಬೈ: ದುಬೈ ಎಮಿರೇಟ್‌ನಲ್ಲಿರುವ ಅಭಯಾರಣ್ಯ ವನ್ನು ಹತ್ತಿರದಿಂದ ಅಧ್ಯಯನ ನಡೆಸುವ ಅವಕಾಶ ಪ್ರಕೃತಿ ಪ್ರಿಯರಿಗೆ ಲಭ್ಯವಾಗಲಿದೆ. ಅದೇ ವೇಳೆ, ಇಲ್ಲಿ ಅರೇಬಿಯನ್ ಪರ್ಯಾಯ ದ್ವೀಪಕ್ಕೆ ವಿಶಿಷ್ಟವಾದ ಜೀವರಾಶಿಯನ್ನೂ ಆಸಕ್ತರು ವೀಕ್ಷಿಸಬಹುದಾಗಿದೆ. ಸರಕಾರಿ ಒಡೆತನದ ದುಬೈ ಡೆಸರ್ಟ್ ಕನ್ಸರ್ವೇಶನ್ ರಿಸರ್ವ್‌ನಲ್ಲಿ ನಡೆಯುತ್ತಿರುವ ಈ ಸಂಶೋಧನೆಯ ವೇಳೆ ಅರೇಬಿಯನ್ ಜಿಂಕೆ, ಗೋರ್ಡನ್ ಕಾಡು ಬೆಕ್ಕು ಮತ್ತು ಮೆಕ್ವೀನ್ಸ್ ಬಸ್ಟರ್ಡ್ (ಕಾಡು ಹಕ್ಕಿ)ಗಳ ಅಧ್ಯಯನ ನಡೆಸಬಹುದಾಗಿದೆ. ಈ ಅಧ್ಯಯನ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಪರಿಸರ ಸಂಘಟನೆ ‘ಬಯೋಸ್ಫಿಯರ್ ಎಕ್ಸ್‌ಪೆಡಿಶನ್ಸ್’ ವಹಿಸಿಕೊಂಡಿದೆ.

ಇದು ಈ ವಲಯದಲ್ಲಿ ನಡೆಯುತ್ತಿರುವ ಈ ಮಾದರಿಯ ಮೂರನೆ ಹಾಗೂ ಯುಎಇಯಲ್ಲಿ ನಡೆಯುತ್ತಿರುವ ಪ್ರಥಮ ಕಾರ್ಯಕ್ರಮವಾಗಿದೆ. ಈ ಮೊದಲು ಎರಡು ಕಾರ್ಯಕ್ರಮಗಳು ಒಮನ್‌ನ ಕೋರಲ್ ರೀಫ್ ಮತ್ತು ಅರೇಬಿಯನ್ ಲೆಪರ್ಡ್‌ಗಳಲ್ಲಿ ನಡೆದಿದ್ದವು. ದುಬೈ ಡೆಸರ್ಟ್ ಕನ್ಸರ್ವೇಶನ್ ರಿಸರ್ವ್ (ಡಿಡಿಸಿಆರ್) 2008ಲ್ಲಿ ಇಂಟರ್‌ನ್ಯಾಶನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐಯುಸಿಎನ್)ನ ಸದಸ್ಯತ್ವ ಪಡೆದಿತ್ತು. ಅಭಯಾರಣ್ಯವು 225 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಇದು ದುಬೈ ಭೂಭಾಗದ 5 ಶೇ.ದಷ್ಟಿದೆ. ಇದರ ಉಸ್ತುವಾರಿಯನ್ನು ವರ್ಲ್ಡ್ ಡಾಟಾ ಬೇಸ್ ಆನ್ ಪ್ರಾಜೆಕ್ಟಡ್ ಏರಿಯಾಸ್ (ಡಬ್ಲುಡಿಪಿಎ) ನೋಡುತ್ತಿದೆ ಹಾಗೂ ಲೆಕ್ಕಪತ್ರವನ್ನು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ವರ್ಲ್ಡ್ ಕನ್ಸರ್ವೇಶನ್ ಮಾನಿಟರಿಂಗ್ ಸೆಂಟರ್ ನೋಡುತ್ತಿದೆ.

ಸಂಶೋಧನೆಯಲ್ಲಿ ಭಾಗವಹಿಸುವವರು ಅಭಯಾರಣ್ಯದಲ್ಲಿನ ಕ್ಷೇತ್ರ ಶಿಬಿರದಿಂದ ಪ್ರವಾಸ ಆರಂಭಿಸುತ್ತಾರೆ. ಅವರು ಲ್ಯಾಂಡ್ ರೋವರ್‌ನಲ್ಲಿ ಮತ್ತು ಕಾಲ್ನಡಿಗೆಯ ಮೂಲಕ ಮುಂದೆ ಸಾಗಿ ಜಿಂಕೆ (ಒರಿಕ್ಸ್)ಗಳ ವರ್ತನೆ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ವೀಕ್ಷಿಸುತ್ತಾರೆ. ಅದೇ ವೇಳೆ, ಕ್ಯಾಮರದಲ್ಲಿ ಸೆರೆಹಿಡಿದ ಹಾಗೂ ಕಾಡಿನಲ್ಲಿರುವ ಗೋರ್ಡನ್ ಕಾಡು ಬೆಕ್ಕುಗಳು ಮತ್ತು ಮೆಕ್ವೀನ್ಸ್ ಬಸ್ಟರ್ಡ್‌ಗಳ ಚಲನವಲನಗಳನ್ನು ರೇಡಿಯೊ ಮತ್ತು ಜಿಪಿಎಸ್ ಟೆಲಿಮೆಟ್ರಿ ಮೂಲಕ ಗಮನಿಸುತ್ತಾರೆ.
ಈ ಎಲ್ಲ ಮೂರು ಜೀವಿಗಳು ಐಯುಸಿಎನ್ ರೆಡ್ ಅಳಿವಿನಂಚಿನಲ್ಲಿರುವ ಪಟ್ಟಿಯಲ್ಲಿವೆ.

‘‘ಅಭಯಾರಣ್ಯ ವಿಸ್ತಾರವಾಗಿದೆ. ಹಾಗಾಗಿ, ಕಾಡಿಗೆ ಹೋಲಿಸಿದರೆ ಪ್ರಾಣಿಗಳ ಚಲನವಲನದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಾಣುವುದಿಲ್ಲ. ಪ್ರಾಣಿಗಳಿಗೆ ಗುಂಡು ಹೊಡೆಯದಂತೆ, ಹಿಂಸೆ ನೀಡದಂತೆ, ಕಿರುಕುಳ ನೀಡದಂತೆ ಅಭಯಾರಣ್ಯಕ್ಕೆ ಬೇಲಿ ನಿರ್ಮಿಸಲಾಗಿದೆ’’ ಎಂದು ಬಯೋಸ್ಫಿಯರ್ ಎಕ್ಸ್‌ಪೆಡಿಶನ್ಸ್‌ನ ಸ್ಥಾಪಕ ಮತ್ತು ಕಾರ್ಯಕಾರಿ ನಿರ್ದೇಶಕ ಡಾ. ಮಥಾಯಸ್ ಹ್ಯಾಮರ್ ಹೇಳುತ್ತಾರೆ. ‘‘ಒರಿಕ್ಸ್ ಜಿಂಕೆಗಳ ಸಂತಾನೋತ್ಪತ್ತಿ ವ್ಯವಸ್ಥೆ ಇಲ್ಲಿ ಸಮರ್ಪಕವಾಗಿದೆ. ಈ ಅಭಯಾರಣ್ಯದಲ್ಲಿ ಹಲವು ನೂರು ಜಿಂಕೆಗಳಿವೆ. ನಾವೀಗ ಕ್ಯಾಮರಾ ಸಿಕ್ಕಿಸುವುದು, ಅಮಲು ಮದ್ದು ನೀಡುವುದು, ಪ್ರಾಣಿಗಳಿಗೆ ಕಾಲರ್ ಅಳವಡಿಸುವುದು, ಅವುಗಳ ಚಲನವಲನಗಳನ್ನು ವೀಕ್ಷಿಸುವುದು, ಲಿಂಗ ಪ್ರಮಾಣವನ್ನು ಲೆಕ್ಕಹಾಕುವುದು ಮುಂತಾದ ತ್ರಾಸದಾಯಕ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ’’ ಎಂದರು. ಮೊದಲು ಈ ಅಭಯಾರಣ್ಯ 27 ಚದರ ಕಿ.ಮೀ. ವಿಸ್ತಾರದ ಅಲ್ ಮಹಾ ಡೆಸರ್ಟ್ ರಿಸಾರ್ಟ್ ಆ್ಯಂಡ್ ಸ್ಪಾ ಆಗಿತ್ತು. 2003ರಲ್ಲಿ ಅದಕ್ಕೆ ಹೆಚ್ಚುವರಿ

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಯುರೋಪಿನಲ್ಲಿ ಬದಲಾವಣೆಯ ಹೊಸ ಗಾಳಿ

ಯುರೋಪಿನಲ್ಲಿ ಈಗ ಬದಲಾವಣೆಯ ಗಾಳಿ ಬೀಸತೊಡಗಿದೆ. ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕ ಬಿಕ್ಕಟ್ಟು ಆ ಭೂಭಾಗದ ನಾಲ್ಕು ಪ್ರದೇಶಗಳಲ್ಲಿ ನಡೆದ ಚುನಾವಣೆಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್

ಮತ್ತೆ ಹಿಂದುತ್ವದ ಹುನ್ನಾರ

ಅಧಿಕಾರ ರಾಜಕಾರಣ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ರಾಜಸ್ಥಾನ, ಉತ್ತರಖಂಡ, ಕರ್ನಾಟಕ ಹ ...


- ಸನತ್‌ಕುಮಾರ ಬೆಳಗಲಿ