mail-img print-img

ನಮ್ಮಣ್ಣ ಡಾನ್ : ಮಾನವೀಯತೆಯ ನವಿರು ನಿರೂಪಣೆ

ರವಿವಾರ - ಫೆಬ್ರವರಿ -19-2012

ಒಂದು ಕಾಲದಲ್ಲಿ ಕನ್ನಡದ ತ್ಯಾಗರಾಜ ಎಂದೇ ಗುರುತಿಸಲ್ಪಟ್ಟವರು ರಮೇಶ್. ಚಿತ್ರದಲ್ಲಿ ಎರಡು ನಾಯಕರಿದ್ದಾರೆ, ಅದರಲ್ಲಿ ರಮೇಶ್‌ನದ್ದು ಪ್ರೇಮಿಯನ್ನು ತ್ಯಾಗ ಮಾಡುವ ಪಾತ್ರ. ರಮೇಶ್ ಒಂದು ರೀತಿಯಲ್ಲಿ ತೀರಾ ಭಾವುಕ, ಅಳುಬುರುಕ ಪಾತ್ರಗಳನ್ನೇ ನಿರ್ವಹಿಸಿಕೊಂಡು ಬಂದವರು. ತನ್ನ ಇಮೇಜನ್ನು ಅಳಿಸಿಹಾಕುವುದಕ್ಕೋ ಎಂಬಂತೆ ಇದೀಗ ಅವರೇ ನಿರ್ಮಿಸಿ, ನಿರ್ದೇಶಿಸುತ್ತಿರುವುದು ಹಾಸ್ಯ ಚಿತ್ರಗಳನ್ನು. ರಾಮ, ಶ್ಯಾಮ, ಭಾಮ ಚಿತ್ರದ ಮೂಲಕ ನಮ್ಮನ್ನೆಲ್ಲ ನಕ್ಕು ನಗಿಸಿದ ರಮೇಶ್, ಆ ಬಳಿಕ ಒಂದರ ಮೇಲೆ ಒಂದರಂತೆ ಹಾಸ್ಯ ಚಿತ್ರಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದೀಗ ಅವರ ಇನ್ನೊಂದು ಹಾಸ್ಯ ಸಾಹಸ ‘ನಮ್ಮಣ್ಣ ಡಾನ್’.

ಇಲ್ಲಿ ರಮೇಶ್‌ರದ್ದು ಡಾನ್ ಪಾತ್ರವಲ್ಲ. ಬದಲಿಗೆ ಗೌರವಾನ್ವಿತ ಡಾಕ್ಟರ್ ಪಾತ್ರ. ಒಬ್ಬ ಡಾನ್ ಚಳ್ಳೆ ಹಣ್ಣು ತಿನ್ನಿಸಲು ಪ್ರಯತ್ನಿಸುವ ಡಾಕ್ಟರ್. ಹಾಗೆಂದು ಇದು ಭೂಗತ ಲೋಕದ ಕತೆಯೂ ಅಲ್ಲ. ಡಾನ್ ಇಲ್ಲಿ ಭೀಕರ ಕೊಲೆಗಾರನೂ ಅಲ್ಲ. ಬದಲಿಗೆ ತನ್ನ ಸೋದರನ ಮೇಲೆ ಪ್ರೀತಿ ಇಟ್ಟುಕೊಂಡ ಡಾನ್‌ನ ಕತೆ. ಇಲ್ಲಿ ಡಾನ್‌ಗೆ ತನ್ನ ಸಹೋದರನೆಂದರೆ ಪಂಚಪ್ರಾಣ. ಅವನಿಗಾಗಿ ಏನನ್ನು ಮಾಡಲು ಇವನು ಸಿದ್ಧ. ಇಂತಹ ಸಂದರ್ಭದಲ್ಲಿ ನಮ್ಮ ಡಾಕ್ಟರ್‌ನ ಪ್ರೇಯಸಿ ಕೈಯಲ್ಲಿ ಈ ಡಾನ್‌ನ ಸಾವು ಸಂಭವಿಸುತ್ತದೆ. ಅದೊಂದು ಆಕಸ್ಮಿಕ ಅಪಘಾತ. ಆದರೆ ಇದನ್ನು ಡಾನ್‌ಗೆ ತಿಳಿಸುವುದು ಹೇಗೆ? ಅದರ ಪರಿಣಾಮ ಏನಾಗಬಹುದು? ಡಾಕ್ಟರ್ ಇಕ್ಕಟ್ಟಿನಲ್ಲಿ ಸಿಲುಕುತ್ತಾನೆ. ಇಲ್ಲಿಂದ ಕತೆಗಳನ್ನು ನಾನಾ ಹಾಸ್ಯಗಳು, ತಿರುವುಗಳಲ್ಲಿ ತಿರುಗುತ್ತಾ ನೋಡುಗರನ್ನು ರಂಜಿಸುತ್ತದೆ.

ಇಲ್ಲಿ ಕತೆಯ ನಾಯಕ ಡಾ. ಅರ್ಜುನ್(ರಮೇಶ್ ಅರವಿಂದ್). ಆತನ ಪ್ರೇಯಸಿ ಮಾಲಿನಿ (ಮೋನಾ) ಅಣ್ಣಾ ಡಾನ್(ರಾಜೇಂದ್ರ ಕಾರಂತ್) ಎಂಬಾತನನ್ನು ಅಪಘಾತದಲ್ಲಿ ಕೊಂದು ಹಾಕುತ್ತಾಳೆ. ಈತ ಕುಖ್ಯಾತ ಡಾನ್ ಮುತ್ತು (ರಾಜು ತಾಲಿಕೋಟೆ)ನ ಸೋದರ. ಡಾಕ್ಟರ್ ಅಣ್ಣಾಡಾನ್‌ನ ಶವವನ್ನು ನರ್ಸಿಂಗ್ ಹೋಮ್‌ನಲ್ಲಿ ಬಚ್ಚಿಡುತ್ತಾನೆ. ಸಾವಿನ ವಿಷಯವನ್ನು ಹೊರಗೆಡಹುವುದಿಲ್ಲ. ಒಂದು ವೇಳೆ ಅದು ಆತನಿಗೆ ತಿಳಿದು ಬಿಟ್ಟರೆ ತನ್ನ ಪ್ರೇಯಸಿಯ ಜೀವಕ್ಕೆ ಅಪಾಯ ಎನ್ನುವುದು ಡಾಕ್ಟರ್‌ಗೆ ಗೊತ್ತು. ಆದುದರಿಂದ ಆತ ಅಣ್ಣಾ ಡಾನ್‌ನನ್ನೇ ಹೋಲುವ ತನ್ನ ಗೆಳೆಯನ ಸಹಾಯವನ್ನು ಪಡೆಯುತ್ತಾನೆ. ಅಲ್ಲಿಂದ ತಂತ್ರ ಆರಂಭವಾಗುತ್ತದೆ. ಆದರೆ ಅಂತಿಮವಾಗಿ ಗೊತ್ತಾಗುತ್ತದೆ ಅಣ್ಣಾ ಡಾನ್ ಸತ್ತಿರುವುದು ಅಪಘಾತದಿಂದಲ್ಲ, ಆತನ ಸಹಾಯಕನಿಂದ ಎನ್ನುವುದು. ಚಿತ್ರದ ಕೊನೆಯಲ್ಲಿ ಸುಖಾಂತವಾಗುತ್ತದೆ.
ಹಾಸ್ಯ ಮತ್ತು ನಗಿಸುವುದಷ್ಟೇ ಚಿತ್ರದ ಗುರಿಯಲ್ಲ. ಮಾನವೀಯ ವೌಲ್ಯಗಳಿಗೆ ಇಲ್ಲಿ ರಮೇಶ್ ಒತ್ತು ನೀಡಿದ್ದಾರೆ. ಅದನ್ನು ನವಿರಾಗಿ ನಿರೂಪಿಸುವುದರಲ್ಲಿ ರಮೇಶ್ ಯಶಸ್ವಿಯಾಗಿದ್ದಾರೆ. ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ರಮೇಶ್ ನಗಿಸುವುದರಲ್ಲಿ ಇನಷ್ಟು ಪ್ರಬುದ್ಧರಾಗಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಮೋನ ಮತ್ತು ಸನಾತಿನಿ ತಮ್ಮ ತಮ್ಮ ಮಿತಿಯಲ್ಲಿ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇಲ್ಲಿ ಡಾನ್ ಮತ್ತು ಡಾಕ್ಟರ್ ನಡುವಿನ ಪಾತ್ರ ಮುಖ್ಯವಾಗಿದ್ದರೂ ಇವರ ನಡುವೆ ಇನ್ನಿತರ ಸಣ್ಣ ಪುಟ್ಟ ಹಾಸ್ಯ ಪಾತ್ರಗಳೂ ಬರುತ್ತವೆ. ಅವೂ ತಮ್ಮ ತಮ್ಮ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತವೆ.

ರಮೇಶ್ ಎಂದಿನಂತೆ ಲವಲವಿಕೆಯಿಂದ ನಟಿಸಿದ್ದಾರೆ. ಎ. ವಿ. ಕೃಷ್ಣ ಅವರ ಕ್ಯಾಮರಾ, ಮ್ಯಾಥ್ಯೂಸ್ ಮನು ಅವರ ಸಂಗೀತ ಗಮನ ಸೆಳೆಯುತ್ತದೆ. ಇಂತಹ ಚಿತ್ರಗಳನ್ನು ನೀಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಕನ್ನಡ ಹಾಸ್ಯ ಚಿತ್ರಗಳ ಡಾನ್ ಆಗಿ ರಮೇಶ್ ಗುರುತಿಸುವುದರಲ್ಲಿ ಅಶ್ಚರ್ಯವಿಲ್ಲ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಯುರೋಪಿನಲ್ಲಿ ಬದಲಾವಣೆಯ ಹೊಸ ಗಾಳಿ

ಯುರೋಪಿನಲ್ಲಿ ಈಗ ಬದಲಾವಣೆಯ ಗಾಳಿ ಬೀಸತೊಡಗಿದೆ. ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕ ಬಿಕ್ಕಟ್ಟು ಆ ಭೂಭಾಗದ ನಾಲ್ಕು ಪ್ರದೇಶಗಳಲ್ಲಿ ನಡೆದ ಚುನಾವಣೆಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್

ಮತ್ತೆ ಹಿಂದುತ್ವದ ಹುನ್ನಾರ

ಅಧಿಕಾರ ರಾಜಕಾರಣ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ರಾಜಸ್ಥಾನ, ಉತ್ತರಖಂಡ, ಕರ್ನಾಟಕ ಹ ...


- ಸನತ್‌ಕುಮಾರ ಬೆಳಗಲಿ