mail-img print-img

ರಂಗಭೂಮಿಗೆ ಪುನಶ್ಚೇತನ ನೀಡಿದ ರಂಗದಿಗ್ಗಜ ಬಿ.ವಿ.ಕಾರಂತ

- ಮೌನೇಶ ವಿಶ್ವಕರ್ಮ
ಗುರುವಾರ - ಫೆಬ್ರವರಿ -23-2012

ಬಂಟ್ವಾಳ ತಾಲೂಕಿನ ಮಂಚಿ - ಕುಕ್ಕಾಜೆಯಲ್ಲಿ ಹುಟ್ಟಿ ದೇಶದೆಲ್ಲೆಡೆ ಸಂಚರಿಸಿ, ರಂಗಭೂಮಿಗೆ ಪುನಶ್ಚೇತನ ನೀಡಿದವರು ರಂಗ ದಿಗ್ಗಜ ಬಿ.ವಿ.ಕಾರಂತರು.ಅವರು ದೇಶಸುತ್ತಿ ರಂಗಭೂಮಿಗೆ ಕಟ್ಟಿಕೊಟ್ಟ ಕೋಶ, ಅವರ ಹಲವು ಆದರ್ಶ ಇಂದಿನ ರಂಗನಿರ್ದೇಶಕರಿಗೆ ಕೈಪಿಡಿಯಾಗಿದೆ.ಅವರ ಜೀವ-ಜೀವನ ಸಂಚಾರದ ನೆನಪನ್ನು ಶಾಶ್ವತವಾಗಿ ದೃಶ್ಯರೂಪದಲ್ಲಿ ಕಟ್ಟಿಕೊಡುವ ಸಾಕ್ಷ್ಯ ಚಿತ್ರದ ಮತ್ತೊಂದು ಪ್ರಯತ್ನ ಇದೀಗ ನಡೆಯುತ್ತಿದೆ.ಖ್ಯಾತ ಚಿತ್ರ ನಿರ್ದೆಶಕ ಪಿ.ಎನ್.ರಾಮಚಂದ್ರರು ಈ ಕೈಂಕರ್ಯದಲ್ಲಿ ತೊಡಗಿಸಿದ್ದು ಈ ಹಿನ್ನೆಲೆಯಲ್ಲಿ ತನ್ನ ಕ್ಯಾಮರಾ ಬಳಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಿದ್ದಾರೆ.ಸೋಮವಾರ ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆಯ ಬಾಬುಕೋಡಿ, ಪತ್ತುಮುಡಿ, ಕುಕ್ಕಾಜೆ ಶಾಲೆ, ಮತ್ತು ಮಂಗಳವಾರ ಕುಕ್ಕರಬೆಟ್ಟು, ಪುತ್ತೂರು ತಾಲೂಕಿನ ಮಹಾಲಿಂಗೇಶ್ವರ ದೇವಸ್ಥಾನ, ಶಂಕರಿಭಟ್ ಮನೆ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು,ಅವರ ಬಾಲ್ಯದ ಹೆಜ್ಜೆ ಗುರುತುಗಳನ್ನು ದಾಖಲಿಸಿಕೊಳ್ಳಲಾಗಿದೆ.ಖ್ಯಾತ ಬರಹಗಾರ್ತಿ ವೈದೇಹಿಯವರ ಸಾಹಿತ್ಯ ನಿರೂಪಣೆಯಲ್ಲಿ ಮೂಡಿ ಬಂದ ಬಿ.ವಿ.ಕಾರಂತರ ಬದುಕನ್ನು ಬಿಚ್ಚಿಟ್ಟ ಆತ್ಮಕಥನ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ಯನ್ನು ಆಧಾರವಾಗಿರಿಸಿಕೊಂಡು ರಾಮಚಂದ್ರರು ಸಾಕ್ಷ್ಯ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ವೈದೇಹಿಯವರು ಹಲವು ವರ್ಷಗಳ ಕಾಲ ಬಿ.ವಿ.ಕಾರಂತರೊಂದಿಗೆ ಮಾತಾಡಿ, ನಿಜ ಜೀವನದ ಘಟನೆಗಳನ್ನು ಪೋಣಿಸಿ ಕೃತಿ ರೂಪಕ್ಕಿಳಿಸಿದ್ದರು.ಅದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಒಂದು ಮಹತ್ವದ ಕೊಡುಗೆ ಎಂಬ ಹಿರಿಮೆಗೂ ಪಾತ್ರವಾಗಿದೆ. ಇದೀಗ ಪಿ.ಎನ್.ರಾಮಚಂದ್ರರು ಆ ಆತ್ಮಕಥನವನ್ನು ದೃಶ್ಯ ರೂಪಕ್ಕಿಳಿಸುವ ಪ್ರಯತ್ನದಲ್ಲಿ ನಿರತರಾಗಿದ್ದು ಚಿತ್ರೀಕರಣ ಅಂತಿಮ ಹಂತದಲ್ಲಿದೆ.ಕೇಂದ್ರ ಸರಕಾರದ ಯೋಜನೆಯಂತೆ ನಿರ್ಮಾಣಗೊಳ್ಳುವ ಈ ಸಾಕ್ಷ್ಯಚಿತ್ರಕ್ಕಾಗಿ ಈಗಾಗಲೇ ಸುಮಾರು 20 ದಿನಗಳ ಚಿತ್ರೀಕರಣ ನಡೆದಿದ್ದು,ಅಂತಿಮವಾಗಿ 52 ನಿಮಿಷಗಳ ಸಾಕ್ಷ್ಯಚಿತ್ರ ರೂಪುಗೊಳ್ಳಲಿದೆ.

ಕಾರಂತರು ತನ್ನ ಹುಟ್ಟೂರು ಮಂಚಿ-ಕುಕ್ಕಾಜೆಯಿಂದ 12ನೆ ವಯಸ್ಸಿನಲ್ಲಿ ಹೊರಟವರು, ತನ್ನ ಜೀವನದುದ್ದಕ್ಕೂ ದೇಶದ ಎಲ್ಲೆಂದರಲ್ಲಿ ತಿರುಗಿ ರಂಗಭೂಮಿಗೆ ಹೊಸ ವ್ಯಾಖ್ಯಾನ ಬರೆದವರು. ಹಾಗಾಗಿ ರಂಗಜಂಗಮ ಎಂದು ಕರೆಸಿ ಕೊಂಡಿರುವ ಬಿ.ವಿ.ಕಾರಂತರು ಸುತ್ತಾಡಿದ ಎಲ್ಲಾ ಪ್ರದೇಶಗಳನ್ನು ಸಾಕ್ಷಚಿತ್ರದ ಕಾರಣಕ್ಕೆ ತನ್ನ ತಾಂತ್ರಿಕ ಬಳಗದೊಂದಿಗೆ ಸುತ್ತಾಡಿದ್ದಾರೆ.ನೂರಾರು ಜನರನ್ನು ಮಾತನಾಡಿ ಸಿದ್ದಾರೆ ಪಿ.ಎನ್.ರಾಮಚಂದ್ರರವರು.ಕಳೆದ 20 ದಿನಗಳ ಅವಧಿಯಲ್ಲಿ ಭೋಪಾಲ್, ವಾರಣಾಸಿ,ದೆಹಲಿ, ಚಂಡೀಗಢ, ಹೆಗ್ಗೋಡು, ಮೈಸೂರು, ಬೆಂಗಳೂರು.ಮಂಚಿ- ಕುಕ್ಕಾಜೆ, ಉಡುಪಿ, ಪುತ್ತೂರು, ಕುಕ್ಕರಬೆಟ್ಟು ಮೊದಲಾದ ಕಡೆಗಳಲ್ಲಿ, ಚಿತ್ರೀಕರಣ ನಡೆಸಿರುವ ಇವರ ತಂಡ, ಕಾರಂತರ ಬದುಕಿನ ಮತ್ತಷ್ಟು ಘಟನಾವಳಿಗಳನ್ನು ಪತ್ತೆಹಚ್ಚಿದೆ.

ಜಂಗಮನ ಹೆಜ್ಜೆ ಹಿಂಬಾಲಿ ಸುವುದೇ ಕಷ್ಟದ ಕೆಲಸ...

ಹಲವು ರಂಗ ಆಶೋತ್ತರಗಳನ್ನು ಹೊತ್ತುಕೊಂಡಿದ್ದ ಕಾರಂತರು ಸುತ್ತದ ಊರುಗಳಿಲ್ಲ. ಹಾಗಾಗಿ ಇವರ ರಂಗಕಾಯಕದ ಊರುಗಳನ್ನು ಸುತ್ತಾಡುವುದು ಕಷ್ಟದ ಕೆಲಸ.ಆದರೆ ಹೋದಲ್ಲೆಲ್ಲಾ ಅವರ ಅಭಿಮಾನಿಗಳ ಕಾರಂತ ಸ್ಮರಣೆ ಮೈ ರೋಮಾಂಚನಗೊಳಿಸುತ್ತದೆ ಎನ್ನುತ್ತಾರೆ ನಿರ್ದೇಶಕ ಪಿ.ಎನ್.ರಾಮಚಂದ್ರರು. ಉತ್ತರ ಭಾರತದ ತಮ್ಮ ಪ್ರಯಾಣದ ಅನು ಭವಗಳನ್ನು ಪತ್ರಿಕೆಯೊಂದಿಗೆ ಹಂಚಿ ಕೊಂಡ ಅವರು, ಒಬ್ಬ ರಂಗ ನಿರ್ದೇಶಕ ನಟರ-ಅಭಿಮಾನಿಗಳ ಮನಸ್ಸನ್ನು ಸೆಳೆದ ಬಗೆಗೆ ಉಂಟಾದ ಅಚ್ಚರಿಯ ಬಗ್ಗೆ ವಿವರಿಸಿದರು.ದೆಹಲಿ ವಾರಣಾಸಿಯಲ್ಲಿ ಕಾರಂತರು ಎಂತಹಾ ರಂಗ ಮೋಡಿ ಮಾಡಿದ್ದಾರೆಂದರೆ, ಕಾರಂತ ಅಂದರೆ ಸಾಕು ‘ವೋ ಹಮಾರಾ ಬಾಬಾ’ ಎನ್ನುತ್ತಾರಂತೆ ಅವರ ಅಲ್ಲಿಯ ಅಭಿಮಾನಿಗಳು. ಆ ಜಂಗಮನ ಹೆಜ್ಜೆಯನ್ನು ಹಿಂಬಾಲಿಸುವುದು ಕಷ್ಟ ಆದರೆ.ಕಾರಂತರ ಮಾತುಗಳಂತೆ ವೈದೇಹಿಯವರು ಕಟ್ಟಿಕೊಟ್ಟ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಕೃತಿ ತನಗೆ ಮಾರ್ಗದರ್ಶಕವಾಗಿದೆ ಎನ್ನುತ್ತಾರೆ ಅವರು.
 

ವಿಶಿಷ್ಟ ವಿನ್ಯಾಸ: ಕಾರಂತರು ಸುತ್ತಾಡಿದ ಪ್ರದೇಶಗಳ ರಂಗ ಕರ್ಮಿಗಳು, ಕಾರಂತರ ಆತ್ಮಕಥನ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ಯನ್ನು ಓದುವ ರೀತಿಯಲ್ಲಿ ಸಾಕ್ಷ್ಯಚಿತ್ರದ ದೃಶ್ಯಗಳನ್ನು ವಿಶಿಷ್ಟ ವಿನ್ಯಾಸದಲ್ಲಿ ಸಂಯೋಜಿಸುವ ಪ್ರಯತ್ನ ನಡೆಸಲಾಗಿದೆ.ಕನ್ನಡದಲ್ಲಿಯೇ ಸಾಕ್ಷ್ಯಚಿತ್ರ ನಿರ್ಮಿಸಬೇಕೆಂಬ ಆಶಯವಿತ್ತು.ಆದರೆ ಕಾರಂತರು ತನ್ನ ಜೀವಿತದ ರಂಗಯಾತ್ರೆಯುದ್ದಕ್ಕೂ ಎಲ್ಲಾ ಭಾಷೆಯಲ್ಲಿ ನಾಟಕಗಳನ್ನು ಮಾಡಿಸಿದ್ದಾರೆ. ಆ ಊರುಗಳಿಗೆಲ್ಲಾ ಹೋದಾಗಲೆಲ್ಲಾ ಅಲ್ಲಿಯ ಭಾಷೆಗಳಲ್ಲಿ ಕಾರಂತರ ಬಗ್ಗೆ ಅಭಿಮಾನಿಗಳು ಮಾತನಾಡುತ್ತಾರಂತೆ. ಹಾಗಾಗಿ ಈ ಸಾಕ್ಷ್ಯಚಿತ್ರದಲ್ಲಿ ಕನ್ನಡ-ಇಂಗ್ಲೀಷ್, ಹಿಂದಿ, ತೆಲುಗು, ಬೊಂದೆಲಿ (ಉಪಭಾಷೆ), ಛತ್ತೀಸ್‌ಗಢ (ಉಪಭಾಷೆ) ಸೇರಿದಂತೆ ಹಲವು ಭಾಷೆಗಳು ಅಡಕವಾಗಿದೆ ಎನ್ನು ತ್ತಾರೆ ಪಿ.ಎನ್. ರಾಮಚಂದ್ರರು.

ಪಿ.ಎನ್.ರಾಮಚಂದ್ರ ಮತ್ತು ಬಳಗ:ಪಿ.ಎನ್.ರಾಮಚಂದ್ರರು ಮುಂಬೈಯಲ್ಲಿ ನೆಲೆಸಿರುವ ಕನ್ನಡಿಗ.ನಮ್ಮ ನಡುವಿನ ಓರ್ವ ಸೃಜನಶೀಲ ನಿರ್ದೇಶಕರು.ತುಳು ಭಾಷೆಯ ‘ಸುದ್ದ’ ಇವರ ಮೊದಲ ಚಿತ್ರ. 2007ರಲ್ಲಿ ನಡೆದ ಓಸೀನ್ ಸಿನಿಫ್ಯಾನ್ ಫೆಸ್ಟಿವಲ್ ಆಫ್ ಏಷ್ಯನ್ ಫಿಲ್ಮ್‌ನ ಉತ್ತಮ ಭಾರತೀಯ ಚಿತ್ರ ಪ್ರಶಸ್ತಿಗೂ ‘ಸುದ್ದ’ ಆಯ್ಕೆಯಾಗಿತ್ತು ಪುಣೆಯ ಫಿಲ್ಮ್ ಇನಿಸ್ಟ್ಯೂಟ್‌ನಲ್ಲಿ ಕಲಿತಿರುವ ಇವರ ಪುಟಾಣಿ ಪಾರ್ಟಿ ಮಕ್ಕಳ ಚಿತ್ರ ಕೂಡ ರಾಷ್ಟ್ರಪ್ರಶಸ್ತಿಗೆ ಪಾತ್ರವಾಗಿದೆ.ಗುಜರಾತ್ ಸೇರಿದಂತೆ ಹಲವು ಭಾಷೆಗಳಲ್ಲಿ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ ಇವರ ಬಿ.ವಿ.ಕಾರಂತರ ಆತ್ಮಕಥನ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಆಧಾರಿತ ಸಾಕ್ಷ್ಯಚಿತ್ರಕ್ಕೆ ಮುಂಬೈಯ ಸಮೀರ್ ಮಹಾಜನ್ ಛಾಯಾ ಗ್ರಹಣ ಹಾಗೂ ಸಂತೋಷ್ ಬೂರ್‌ರು ಧ್ವನಿ ವಿನ್ಯಾಸಗೊಳಿಸುತ್ತಿದ್ದಾರೆ.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಯುರೋಪಿನಲ್ಲಿ ಬದಲಾವಣೆಯ ಹೊಸ ಗಾಳಿ

ಯುರೋಪಿನಲ್ಲಿ ಈಗ ಬದಲಾವಣೆಯ ಗಾಳಿ ಬೀಸತೊಡಗಿದೆ. ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕ ಬಿಕ್ಕಟ್ಟು ಆ ಭೂಭಾಗದ ನಾಲ್ಕು ಪ್ರದೇಶಗಳಲ್ಲಿ ನಡೆದ ಚುನಾವಣೆಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್

ಮತ್ತೆ ಹಿಂದುತ್ವದ ಹುನ್ನಾರ

ಅಧಿಕಾರ ರಾಜಕಾರಣ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ರಾಜಸ್ಥಾನ, ಉತ್ತರಖಂಡ, ಕರ್ನಾಟಕ ಹ ...


- ಸನತ್‌ಕುಮಾರ ಬೆಳಗಲಿ