ತೆಳ್ಳಗಾಗಬೇಕಾದರೆ.. ಭೋಜನವನ್ನು ಕಡಿಮೆ ಮಾಡಬೇಕು..ಕೆಲವೊಂದು ವಿಧವಾದ ಆಹಾರ ಪದಾರ್ಥ ಗಳನ್ನು ಮಾತ್ರವೇ ತೆಗೆದುಕೊಳ್ಳಬೇಕು ಇಂತಹ ಹಲವಾರು ಸಲಹೆಗಳನ್ನು ಸ್ನೇಹಿತರು ನೀಡುತ್ತಿರುತ್ತಾರೆ. ಎಲ್ಲವನ್ನು ಪಾಲಿಸದೆ, ವಾಸ್ತವವನ್ನು ಅರಿಯುವ ಪ್ರಯತ್ನ ಮಾಡಬೇಕು.
ತಪ್ಪು ಕಲ್ಪನೆ: ದಿನವೂ ಹಾಲು ಕುಡಿದರೆ ತೂಕ ಕಡಿಮೆಯಾಗುತ್ತದೆ. ಹಾಲು ಕುಡಿದರೆ ತೂಕ ಕಡಿಮೆಯಾಗುತ್ತದೆ ಎಂಬುದು ವಾಸ್ತವವಲ್ಲ. ಆದರೆ ಅದರಲ್ಲಿರುವ ಕ್ಯಾಲ್ಸಿಯಂ ದೇಹದಲ್ಲಿರುವ ಕೊಬ್ಬಿನ ಸಂಗ್ರಹದೊಂದಿಗೆ ಹೋರಾಡು ತ್ತದೆ. ಹಾಗೆಯೇ ಹಾಲಿನ ಉತ್ಪನ್ನಗಳನ್ನು ಸೇವಿಸುವುದ ರಿಂದ, ದೇಹದಲ್ಲಿ ಕ್ಯಾಲೋರಿಗಳ ಸಂಖ್ಯೆಯು ಸಹ ಹೆಚ್ಚಾಗುವುದಿಲ್ಲವೆಂದು ಒಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಬೆಣ್ಣೆ ತೆಗೆದಂತಹ ಹಾಲು ಕುಡಿದರೆ ಮಾತ್ರ ಇದು ಸಾಧ್ಯವಾಗುತ್ತದೆ.
ಆದುದರಿಂದ ಬೆಣ್ಣೆ ತೆಗೆದ ಹಾಲು, ಹಾಲಿನ ಉತ್ಪನ್ನಗಳನ್ನೇ ತೆಗೆದುಕೊಳ್ಳಿ. ಇದರಿಂದ ದೇಹದಲ್ಲಿಯ ಕೊಬ್ಬು ಶೀಘ್ರವಾಗಿ ಕರಗುತ್ತದೆ. ನಿಮಗೆ ಬೇಕೆನಿಸಿದ ಸುಂದರವಾದ ಆಕೃತಿ ನಿಮ್ಮದಾಗುತ್ತದೆ. ತಪ್ಪು ಕಲ್ಪನೆ: ಬೆಳಗ್ಗೆ ತೆಗೆದುಕೊಳ್ಳುವ ಉಪಹಾರವನ್ನು ತಗ್ಗಿಸಬೇಕು, ರಾತ್ರಿಯ ಭೋಜನವನ್ನು ಹೆಚ್ಚಿಸಬೇಕು. ಆಗಲೇ ಆರೋಗ್ಯ ಚೆನ್ನಾಗಿರುತ್ತದೆ.
ದಿನವೆಲ್ಲಾ ಉತ್ಸಾಹದಿಂದ ಕೆಲಸ ಮಾಡಬೇಕಾದರೆ ಬೆಳಗಿನ ಉಪಹಾರ ಸ್ವಲ್ಪ ಹೆಚ್ಚಾಗಿಯೇ ಇರಬೇಕು. ಬದಲಿಗೆ ರಾತ್ರಿಯ ಆಹಾರವನ್ನು ಮಿತವಾಗಿ ತೆಗೆದು ಕೊಳ್ಳಬೇಕು. ಯಾಕೆಂದರೆ ರಾತ್ರಿ ಭೋಜನದ ನಂತರ ಕೇವಲ ನಿದ್ದೆ ಮಾಡುತ್ತೇವೆ. ಆದುದರಿಂದ ಹೆಚ್ಚಿನ ಆಹಾರದ ಅಗತ್ಯವಿರದು. ದೇಹಕ್ಕೆ ಶಕ್ತಿ ದೊರೆಯ ಬೇಕಾದರೆ ಹಣ್ಣು ,ಪೋಷಕಾಂಶಗಳಿರುವ ಅಲ್ಪ ಆಹಾರ ವನ್ನು ಆಯ್ಕೆ ಮಾಡಿಕೊಳ್ಳಬೇಕು.
ತಪ್ಪುಕಲ್ಪನೆ: ಕಾಫಿ ಹೆಚ್ಚಾಗಿ ಕುಡಿಯುವುದು ಒಳ್ಳೆಯದು.
ಕೆಲಸದ ಹೊರೆ, ಒತ್ತಡ, ಹಸಿವು ಎಂದೆನಿಸಿದಾಗ ಬಹಳಷ್ಟು ಮಂದಿ ಕಾಫಿಯನ್ನು ಸೇವಿಸುತ್ತಾರೆ. ಪರಿಣಾ ಮವಾಗಿ ಉಳಿದ ಆಹಾರವನ್ನು ಕಡಿಮೆ ಮಾಡುತ್ತಾರೆ. ಆದರೆ ಹೀಗೆ ಮುಂದುವರಿದರೆ ನಿದ್ರಾಹೀನತೆ, ರಕ್ತ ದೊತ್ತಡದಂತಹ ಸಮಸ್ಯೆಗಳು ತಲೆಯೆತ್ತುವ ಸಾಧ್ಯತೆ ಯಿರುತ್ತದೆ. ಆದುದರಿಂದ ಕಾಫಿ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸುವುದರ ಬದಲು ಪರಿಮಿತವಾಗಿ ಸೇವಿಸುತ್ತಾ, ಪೋಷಕಾಂಶವುಳ್ಳ ಆಹಾರವನ್ನು ಆಯ್ಕೆ ಮಾಡಿಕೊಳ್ಳಬೇಕು. ಕಾಫಿಯ ಬದಲಿಗೆ ತಾಜಾ ಹಣ್ಣಿನ ರಸವನ್ನು ಕುಡಿಯಬಹುದು. ಕೇವಲ ಕಾಫಿಯೊಂದನ್ನು ಮಾತ್ರವಲ್ಲ ಕೆಫೀನ್ ಇರುವ ತಂಪು ಪಾನೀಯದ ಸೇವನೆಯನ್ನು ತಗ್ಗಿಸಬೇಕು.
ತಪ್ಪು ಕಲ್ಪನೆ: ರಾತ್ರಿಯ ವೇಳೆ ಊಟ ತಡವಾಗಿ ಮಾಡುವುದು ಒಳ್ಳೆಯದು.
ರಾತ್ರಿ ವೇಳೆ ಭೋಜನ ಯಾವಾಗ ಮಾಡಬೇಕೆಂದು ಆಲೋಚಿಸದೆ ಸಾಧ್ಯವಾದಷ್ಟು ಮಟ್ಟಿಗೆ ಬೇಗನೆ ಮಾಡ ಬೇಕು. ಅದು ಸಹ ಪ್ರತಿದಿನವೂ ಒಂದೇ ವೇಳೆಗೆ ಊಟ ಮಾಡಬೇಕು. ಇದರಿಂದ ತೆಗೆದುಕೊಂಡ ಆಹಾರ ಸಕ್ರಮವಾಗಿ ಜೀರ್ಣವಾಗುತ್ತದೆ. ಮುಖ್ಯವಾಗಿ ನಿದ್ದೆ ಮಾಡುವ ಎರಡು ಗಂಟೆಗಳ ಮೊದಲು ಭೋಜನ ಮಾಡಬೇಕು. ಇಲ್ಲದಿದ್ದರೆ ಹೊಟ್ಟೆಯ ಬಳಿ ಕೊಬ್ಬು ಸಂಗ್ರಹವಾಗುತ್ತದೆ. ತೂಕ ಹೆಚ್ಚಾಗುವ ಸಾಧ್ಯತೆಯಿರು ತ್ತದೆ.
ತಪ್ಪು ಕಲ್ಪನೆ: ಒಂದೇ ಸಲಕ್ಕೆ ಹೆಚ್ಚಿನ ಭೋಜನ ಮಾಡುವುದರಿಂದ ಜೀರ್ಣಕ್ರಿಯೆಯು ಉತ್ತಮ ಗೊಳ್ಳುತ್ತದೆ.
ಬಹಳ ಮಂದಿ ಹಸಿವಿನಿಂದಿದ್ದು ಒಂದೇ ಸಲಕ್ಕೆ ಅಧಿಕ ಆಹಾರವನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದು ತಪ್ಪು. ಒಂದೇ ಸಲ ಅಲ್ಲದೆ, ಸ್ವಲ್ಪ ಸ್ವಲ್ಪವೇ ದಿನಕ್ಕೆ ಎರಡು ಮೂರು ಸಲ ತಿನ್ನಬೇಕು. ಆಗಲೇ ತೆಗೆದುಕೊಂಡ ಆಹಾರ ಸಕ್ರಮವಾಗಿ ಜೀರ್ಣವಾಗುತ್ತದೆ. ಇದರ ಸಮಸ್ಯೆಗಳು ಸಹ ಬರುವುದಿಲ್ಲ.
ತಪ್ಪು ಕಲ್ಪನೆ: ಅನ್ನವನ್ನು ಬಿಟ್ಟರೆ ಸ್ಥೂಲಕಾಯದ ಸಮಸ್ಯೆಯು ತಗ್ಗುತ್ತದೆ.
ಬಹಳಷ್ಟು ಮಂದಿ ತೂಕ ಕಡಿಮೆ ಮಾಡಲು ಆಚರಿಸುವ ನಿಯಮಗಳಲ್ಲಿ ಇದು ಸಹ ಒಂದು. ಅನ್ನವನ್ನು ಪೂರ್ತಿಯಾಗಿ ಬಿಟ್ಟುಬಿಡುತ್ತಿರುತ್ತಾರೆ. ಆದರೆ ಇದರಲ್ಲಿ ಸ್ವಲ್ಪವೂ ಸತ್ಯಾಂಶವಿಲ್ಲ. ಊಟ ಮಾಡಿದರೂ ಸಹ ನಿಯಮಿತವಾಗಿ ವ್ಯಾಯಾಮ ಮಾಡಿದರೆ ಅನೇಕ ಸಮಸ್ಯೆಗಳಿಗೆ ಪೂರ್ಣ ವಿರಾಮ ಹಾಕಬಹುದು. ಅನ್ನವನ್ನು ತಗ್ಗಿಸಿದರೂ.. ಅದಕ್ಕೆ ಬದಲಾಗಿ ಅಷ್ಟೇ ಪ್ರಮಾಣದಲ್ಲಿ ಇತರ ಪದಾರ್ಥಗಳನ್ನು ತೆಗೆದುಕೊಳ್ಳಬೇಕು. ಆಗಲೇ ಆರೋಗ್ಯವಾಗಿರುತ್ತೇವೆ.
ಕೃಪೆ: ಆರೋಗ್ಯ
ಬಹಳ ಮಂದಿ ಹಸಿವಿನಿಂದಿದ್ದು ಒಂದೇ ಸಲಕ್ಕೆ ಅಧಿಕ ಆಹಾರವನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದು ತಪ್ಪು. ಒಂದೇ ಸಲ ಅಲ್ಲದೆ, ಸ್ವಲ್ಪ ಸ್ವಲ್ಪವೇ ದಿನಕ್ಕೆ ಎರಡು ಮೂರು ಸಲ ತಿನ್ನಬೇಕು. ಆಗಲೇ ತೆಗೆದುಕೊಂಡ ಆಹಾರ ಸಕ್ರಮವಾಗಿ ಜೀರ್ಣವಾಗುತ್ತದೆ. ಇದರ ಸಮಸ್ಯೆಗಳು ಸಹ ಬರುವುದಿಲ್ಲ.
ಯುರೋಪಿನಲ್ಲಿ ಈಗ ಬದಲಾವಣೆಯ ಗಾಳಿ ಬೀಸತೊಡಗಿದೆ. ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕ ಬಿಕ್ಕಟ್ಟು ಆ ಭೂಭಾಗದ ನಾಲ್ಕು ಪ್ರದೇಶಗಳಲ್ಲಿ ನಡೆದ ಚುನಾವಣೆಯ ...
Click here to post your views ಈ ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...
ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...
ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...
ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...
ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...
ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...
ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...
ಅಧಿಕಾರ ರಾಜಕಾರಣ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ರಾಜಸ್ಥಾನ, ಉತ್ತರಖಂಡ, ಕರ್ನಾಟಕ ಹ ...